ಕರ್ನಾಟಕ

karnataka

ETV Bharat / state

ಮಾನವ ಮಲಕ್ಕೂ ಬಂತು ಬೇಡಿಕೆ... ಕಸಕ್ಕೂ ಕೊಡಬೇಕು ಈಗ ಕಾಸು!

ಇಷ್ಟು ದಿನ ಮಾನವ ದೇಹದ ತ್ಯಾಜ್ಯ ಮಲ ವೇಸ್ಟ್​ ಅಂತಾ ಎಲ್ಲರೂ ಭಾವಿಸಿದ್ರು. ಆದರೆ ಅದು ವೇಸ್ಟ್​ ಅಲ್ಲ ಅಂತಾ ಕೆಲವು ಅಧಿಕಾರಿಗಳು ಸಾಧಿಸಿ ತೋರಿಸಿದ್ದಾರೆ. ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮಲದಿಂದ ತಯಾರಾಗುವ ಸದ್ಬಳಕೆಯ ಗೊಬ್ಬರ ಘಟಕ ಈಗ ದೇವನಹಳ್ಳಿಯಲ್ಲಿ ಆರಂಭವಾಗಿದೆ.

ಕಸಕ್ಕೂ ಕೊಡಬೇಕು ಈಗ ಕಾಸು

By

Published : Apr 2, 2019, 9:26 PM IST

ಮಾನವ ಮಲದಿಂದ ರಸಗೊಬ್ಬರ! ಇಂತಹದೊಂದು ಸುದ್ದಿ ನಿಮ್ಮ ಕಿವಿಗೆ ಬೀಳ್ತಿದ್ದಂಗೆ ಮುಖದಲ್ಲಿ ವಾಕರಿಕೆಯ ಚಹರೆ ಕಾಣಿಸಿಕೊಳ್ಳೋದು ಸಹಜ. ಏನಪ್ಪಾ ಇದು ಮನುಷ್ಯನ ಮಲ ಗೊಬ್ಬರವಾಗಿ ತಯಾರಾಗಿ ಕೃಷಿ ಭೂಮಿಗೆ ಬಳಕೆಯಾಗುತ್ತಿದೆ ಅಂತಾ ಅನಿಸಬಹುದು. ಹೌದು ಮಾನವನ ಗೊಬ್ಬರ ಈಗ ಬಹು ಬೇಡಿಕೆಯಿಂದ ಕೃಷಿಗೆ ಬಳಕೆಯಾಗುತ್ತಿದೆ.

ಇಡೀ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೀಕಲ್ ಸ್ಲಡ್ಜ್ ಮ್ಯಾನೇಜ್​ಮೆಂಟ್ ಘಟಕ ಕಾರ್ಯ ಆರಂಭಿಸಿದೆ.

ಈ ಘಟಕದಲ್ಲಿ ನಿತ್ಯ ಎರಡು ಸಾವಿರ ಲೀಟರ್ ದ್ರವರೂಪದ ತ್ಯಾಜ್ಯ ಸಿದ್ಧಗೊಳಿಸಿ ಅದನ್ನೂ ಘನೀಕರಿಸಿ ಪ್ರತಿ ಕೆ.ಜಿಗೆ ಏಳು ರೂಪಾಯಿಯಂತೆ ಮಾರಾಟ ಕೂಡ ನಡೀತಿದೆ.

ಮಾನವ ಮಲದ ಬೇಡಿಕೆ ಬಗ್ಗೆ ಒಂದಿಷ್ಟು ಮಾಹಿತಿ

ಇಡೀ ದೇವನಹಳ್ಳಿಯಲ್ಲಿ ನಿತ್ಯ ಸಿಗುವ ಸುಮಾರು 4 ರಿಂದ 5 ಟನ್ ಹ್ಯೂಮನ್ ವೇಸ್ಟ್ ಸಂಗ್ರಹಿಸುವ ಪುರಸಭೆ ಅದನ್ನು 11 ರಿಂದ 12 ಟನ್ ಹಸಿ ಗೊಬ್ಬರ ಮತ್ತು ಮಣ್ಣಿನ ಜೊತೆ ಬೆರೆಸುತ್ತಿದೆ. ಯಾವುದೇ ಮಾನವ ಸಂಪರ್ಕ ಇಲ್ಲದೆ ಎಲ್ಲವೂ ವೈಜ್ಞಾನಿಕವಾಗಿ ಮತ್ತು ಯಾಂತ್ರೀಕೃತ ಸಂಗ್ರಹಿಸುವುದರಿಂದ ಅಡ್ಡಪರಿಣಾಮಗಳೂ ಇಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಇದೇ ತ್ಯಾಜ್ಯ ಬಳಸಿ ಸುಂದರ ಉದ್ಯಾನವನ್ನೂ ನಿರ್ಮಿಸಿರುವುದು ಇಡೀ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ.

ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಘಟಕ ಇದಾಗಿದ್ದು, ಉತ್ತಮ ನಿರ್ವಹಣೆಗಾಗಿ ಇಲ್ಲಿನ ಅಧಿಕಾರಿಗಳು ಈಗಾಗಲೆ ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಯಾವ ನಗರ ಮತ್ತು ಪಟ್ಟಣಗಳಲ್ಲಿ ಯುಜಿಡಿ ಸಂಪರ್ಕ ಇರುವುದಿಲ್ಲವೋ ಅಲ್ಲಿ ಹ್ಯೂಮನ್ ವೇಸ್ಟ್ ವಿಲೇವಾರಿಗೆ ಸಮಸ್ಯೆ ಎದುರಿಸದಂತೆ ಇಂತಹ ಘಟಕ ನಿರ್ಮಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪುರಸಭೆ, ನಗರಸಭೆ, ಬಿಬಿಎಂಪಿ ಅಂದ್ರೆ ಸಾಕು ಬರೀ ಅವ್ಯವಹಾರಗಳೇ ಕಾಣಿಸುತ್ತೆ. ಇಂತಹವುಗಳ ಮಧ್ಯೆಯೂ ಕೆಲವು ಅಧಿಕಾರಿಗಳು ಮಾತ್ರ ಅಭಿವೃದ್ದಿ ಬಗ್ಗೆ ಯೋಚಿಸುತ್ತಾರೆ. ಅದಕ್ಕೆ ಉದಾಹರಣೆ ಇಲ್ಲಿನ ಸ್ಲಡ್ಜ್​ ಮ್ಯಾನೇಜ್​ಮೆಂಟ್​ ಘಟಕ, ಸದ್ಯ ಎಲ್ಲರ ಮನಗೆಲ್ಲುತ್ತಿರುವ ಈ ಘಟಕ ಮುಂದೆ ಎಲ್ಲಾ ಪುರಸಭೆಗಳಲ್ಲೂ ನಿರ್ಮಾಣವಾಗಿ ಜನರಿಗೆ ಪ್ರಯೋಜನವಾಗಲಿ ಅನ್ನೋದು ಎಲ್ಲರ ಆಶಯ..

ABOUT THE AUTHOR

...view details