ಬೆಂಗಳೂರು: ಸಾವಿರ ರೂ. ಮಾಸ್ಕ್ ದಂಡ ಜನರಲ್ಲಿ ಅರಿವು ಮೂಡಿಸುವ ಬದಲು ಕಿರುಕುಳ ನೀಡುತ್ತಿದೆ ಎಂದು ಜನರು ತೀವ್ರ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆ ಸರ್ಕಾರ ದಂಡದ ಮೊತ್ತ ಇಳಿಕೆ ಮಾಡಿದೆ.
ಸಾರ್ವಜನಿಕರ ತೀವ್ರ ವಿರೋಧ: ಮಾಸ್ಕ್ ದಂಡ ಇಳಿಕೆ ಮಾಡಿದ ಸರ್ಕಾರ
ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡಿದ ಸರ್ಕಾರ, ಸಾವಿರ ರೂ. ದುಬಾರಿ ದಂಡ ಜಾರಿಗೆ ತಂದಿತ್ತು. ದಂಡ ಕಟ್ಟದವರನ್ನು ಪೊಲೀಸ್ ಸ್ಟೇಷನ್ಗೂ ಎಳೆದೊಯ್ಯಲಾಗುತ್ತಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಸಾವಿರ ರೂ.ನಿಂದ 250 ರೂ.ಗೆ ದಂಡವನ್ನು ಇಳಿಕೆ ಮಾಡಿದೆ.

ಜನಪ್ರತಿನಿಧಿಗಳು ಮಾಸ್ಕ್ ಹಾಕದೆ ಓಡಾಡುತ್ತಿದ್ದಾರೆ, ಇವರಿಗೇನು ಕ್ರಮ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರತೀ ದಿನ ಪ್ರತೀ ವಾರ್ಡ್ಗಳಲ್ಲಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ಇದರಲ್ಲಿ ಬಡವರು, ಶ್ರೀಮಂತರು ಎಂಬ ಭೇದ ಭಾವ ಇಲ್ಲ ಯಾರೇ ಆಗಲಿ ದಂಡ ಹಾಕಲಾಗುತ್ತದೆ ಎಂದರು.