ಕರ್ನಾಟಕ

karnataka

ETV Bharat / state

ಅಣ್ಣನ ಮೇಲಿನ ಸಿಟ್ಟನ್ನು ತಂಗಿ ಮೇಲೆ ತೀರಿಸಿಕೊಂಡ ಯುವತಿ: ಪೊಲೀಸ್ ವಿಚಾರಣೆಯಲ್ಲಿ ಹೊರಬಂತು ಲವ್ ಸ್ಟೋರಿ! - obscene photos in instragram

ಅಣ್ಣನ ಮೇಲಿನ ಕೋಪವನ್ನು ತಂಗಿ ಮೇಲೆ ತೀರಿಸಿಕೊಂಡ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋಗಳನ್ನು ಪೋಸ್ಟ್​ ಮಾಡಿದ್ದ ಬಿಕಾಂ ಯುವತಿ ಅರೆಸ್ಟ್.

ಬೆಂಗಳೂರು
ಬೆಂಗಳೂರು

By

Published : Nov 17, 2022, 7:59 PM IST

Updated : Nov 17, 2022, 9:18 PM IST

ಬೆಂಗಳೂರು: ಅಣ್ಣನ ಮೇಲಿನ ದ್ವೇಷಕ್ಕೆ ಆತನ ತಂಗಿಯನ್ನು ಟಾರ್ಗೆಟ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ​. ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಪಾಠ ಕಲಿಸಲು ಹೋದ ಯುವತಿ, ಆತನ ತಂಗಿ ಹೆಸರಲ್ಲಿ ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಫೋಟೋಗಳನ್ನು ಪೋಸ್ಟ್​ ಮಾಡಿ ಈಗ ಜೈಲು ಹಕ್ಕಿಯಾಗಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಲ್ಲಿ ಫೇಕ್​ ಅಕೌಂಟ್​ ಕ್ರಿಯೆಟ್​ ಮಾಡಿ, ಅಶ್ಲೀಲ ಚಿತ್ರಗಳನ್ನು ಹಾಕೋದು ಕಾಮನ್​. ಅದರಲ್ಲೂ ಯುವತಿಯರ ನಂಬರ್​ ಹಾಕಿ ಕೆಲವರು ವಿಕೃತಿ ಮೆರೆಯುತ್ತಾರೆ. ಇಂತಹದ್ದೇ ಘಟನೆಯೊಂದು ಈಶಾನ್ಯ ವಿಭಾಗದ ಸೈಬರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ಒಂದು ಟ್ವಿಸ್ಟ್​ ಇದೆ. ಅಣ್ಣನ ಮೇಲಿನ ಸಿಟ್ಟಿಗೆ ಆತನ ತಂಗಿಯ ಹೆಸರಲ್ಲಿ ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆಯಲಾಗಿದ್ದು, ಅದರಲ್ಲಿ ಆಕೆಯ ಮಾರ್ಫ್​ ಮಾಡಿದ ಫೋಟೋಗಳನ್ನ ಸಹ ಅಪ್​ಲೋಡ್​ ಮಾಡಲಾಗಿದೆ.

ಜೊತೆಗೆ ನಾನು ಕಾಲ್​ ಗರ್ಲ್​ ನನ್ನ ಸಂಪರ್ಕಿಸೋಕೆ ಈ ನಂಬರ್​ಗೆ ಕರೆ ಮಾಡಿ ಅಂತಲೂ ಪೋಸ್ಟ್​ ಮಾಡಲಾಗಿದೆ. ಅಷ್ಟೇ ಅಲ್ಲ ಯಾವ ಯುವತಿಯ ಹೆಸರಲ್ಲಿ ನಕಲಿ ಖಾತೆ ತೆರೆಯಲಾಗಿರುತ್ತೋ ಆಕೆಯ ಓರಿಜಿನಲ್​ ಅಕೌಂಟ್​ ಅನ್ನೂ ಫಾಲೋ ಮಾಡಲಾಗಿದೆ.

ನಕಲಿ ಖಾತೆ ತೆರೆಯುತ್ತಿದ್ದಂತೆಯೇ ಯುವಕನ ತಂಗಿಗೆ ನೂರಾರು ಕರೆಗಳು ಬರಲಾರಂಭಿಸಿದ್ದವು. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಯುವತಿ ಹಾಗೂ ಆಕೆಯ ಕುಟುಂಬದವರು ಈಶಾನ್ಯ ವಿಭಾಗದ ಸೈಬರ್ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕಿಂಗ್​ ವಿಷಯವೊಂದು ತಿಳಿಯುತ್ತೆ. ಯಾವುದೋ ಸೈಕೋ ಹುಡುಗ ಈ ಕೆಲಸ ಮಾಡಿರಬಹುದು ಅಂತ ತನಿಖೆ ಆರಂಭಿಸುವ ಅವರಿಗೆ ಈ ಕೃತ್ಯದ ಹಿಂದೆ ಇರೋದು ಒಬ್ಬ ಯುವತಿ ಅನ್ನೋದು ತಿಳಿಯುತ್ತೆ. ಅಷ್ಟೇ ಅಲ್ಲ ದೂರು ನೀಡಿದ ಯುವತಿಯ ಪರಿಚಯದವಳೇ ಅನ್ನೋದು ಬೆಳಕಿಗೆ ಬಂದಿದೆ‌.

ದೂರು ನೀಡಿದ ಯುವತಿಯ ಅಣ್ಣನ ಫ್ರೆಂಡ್​ಗೆ ಈ ಕಿರಾತಕಿ ಲವರ್​ ಆಗಿರುತ್ತಾಳೆ. ಒಮ್ಮೆ ಯುವತಿಯ ಅಣ್ಣ ಈಕೆ ಸರಿಯಲ್ಲ ಪ್ರೀತಿಸಬೇಡ ಅಂತ ಹೇಳಿದ್ದನಂತೆ. ಈ ವಿಷಯ ತಿಳಿದ ಮೇಲೆ ಆಕೆ ಸೇಡು ತೀರಿಸಿಕೊಳ್ಳಲು ಆತನ ತಂಗಿ ಹೆಸರಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಚಿತ್ರಗಳನ್ನು ಪೋಸ್ಟ್​ ಮಾಡಿ, ಯುವತಿಯ ಒರಿಜಿನಲ್​ ಖಾತೆಗೆ ಕೆಟ್ಟದಾಗಿ ಮೆಸೇಜ್​ ಸಹ ಕಳುಹಿಸಲಾರಂಭಿಸಿದ್ದಳಂತೆ.

ಇನ್ನು ನೊಂದ ಯುವತಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಆ ಕಿರಾತಕಿ ನಕಲಿ ಖಾತೆ ಡಿಲೀಟ್​ ಮಾಡಿದ್ದಾಳೆ. ಅಲ್ಲದೇ ತನಗೇನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದಾಳೆ. ತನಿಖೆ ಆರಂಭಿಸಿದ ಪೊಲೀಸರು, ಬಿಕಾಂ ಓದುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.

(ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ವಾಶ್​​ ರೂಮ್​ಗೆ ಹೋಗಿ ಬರುವಷ್ಟರಲ್ಲೇ ಬ್ಯಾಗ್ ಕಳವು)

Last Updated : Nov 17, 2022, 9:18 PM IST

ABOUT THE AUTHOR

...view details