ಆನೇಕಲ್: ಕೊರೊನಾ, ಲಾಕ್ಡೌನ್ ನಡುವೆ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನವಾಗಿದೆ.
ಕೊರೊನಾ ನಡುವೆ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಆಗಮಸಿದ ಜಿರಾಫೆ - ಬನ್ನೇರುಘಟ್ಟ ಜೈವಿಕ ಉದ್ಯಾವನ
ಲಾಕ್ಡೌನ್ ನಡುವೆ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ ಆಗಮನವಾಗಿದೆ.
ಕೊರೊನಾ ನಡುವೆ ಬನ್ನೇರುಘಟ್ಟ ಜೈವಿಕ ಉದ್ಯಾವನಕ್ಕೆ ಆಗಮಸಿದ ಜಿರಾಫೆ
ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಿಂದ ಒಂದು ವರ್ಷದ ಯಧುನಂದನ್ ಎಂಬ ಗಂಡು ಜಿರಾಫೆ, ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆದುಕೊಂಡು ಬರಲಾಗಿದೆ. ಈ ಮೂಲಕ ಉದ್ಯಾನದಲ್ಲಿ ಎರಡು ವರ್ಷದಿಂದ ಒಂಟಿಯಾಗಿದ್ದ ಗೌರಿ ಎಂಬ ಜಿರಾಫೆಗೆ ಇದೀಗ ಬಂದ ಗಂಡು ಜಿರಾಫೆ ಜೊತೆಯಾಗಿದೆ.
ಇಂದು ಉದ್ಯಾನದಲ್ಲಿ ಎರಡು ಜಿರಾಫೆಗಳು ನಲಿದಾಡುತ್ತಿದ್ದ ದೃಶ್ಯಗಳನ್ನು ಕಂಡು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.