ಬೆಂಗಳೂರು : ಗಾಂಜಾ ಸೇದುವುದಕ್ಕೆ ಹಣವಿಲ್ಲದೆ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಮೂವರನ್ನು ಕೆ ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಸೀಂ ಪಾಷ, ಅಬ್ಬಾಸ್ ಖಾನ್, ಶಬ್ಬೀರ್ ಮೊಹಮ್ಮದ್ ನದೀಂ ಬಂಧಿತರು. ಆರೋಪಿಗಳಿಂದ ಮೂರೂವರೆ ಲಕ್ಷ ರೂ. ಬೆಲೆ ಬಾಳುವ 10 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಗಾಂಜಾ ಸೇದುವುದಕ್ಕೆ ಹಣ ಇಲ್ಲದೆ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಅಂದರ್ - bengaluru ganja case
ಆರೋಪಿಗಳು ಕೆ.ಪಿ.ಅಗ್ರಹಾರ, ಬಾಣಸವಾಡಿ, ಅಮೃತಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಡಿ.ಜೆ.ಹಳ್ಳಿ, ಕೆ.ಆರ್.ಪುರಂ ಸುತ್ತಮುತ್ತಲಿನ ಏರಿಯಾಗಳಲ್ಲಿ ಬೈಕ್ ಮಾರುತ್ತಿದ್ದರು..
ಗ್ಯಾಂಗ್ ಅಂದರ್
ಬಂಧಿತರ ಪೈಕಿ ವಸೀಂ ಗಾಂಜಾ ವ್ಯಸನಿಯಾಗಿದ್ದ. ಮಾದಕ ವಸ್ತು ಸೇವನೆಗಾಗಿ ಹಣ ಹೊಂದಿಸಲು ಕಳ್ಳತನದ ಕೃತ್ಯಕ್ಕಿಳಿದಿದ್ದ ವಸೀಂ, ತನ್ನ ಸಹಚರರ ಜೊತೆಗೂಡಿ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ವಾಹನಗಳನ್ನು ಕೇವಲ 2 ರಿಂದ 5 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಆರೋಪಿಗಳು ಕೆ.ಪಿ.ಅಗ್ರಹಾರ, ಬಾಣಸವಾಡಿ, ಅಮೃತಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಡಿ.ಜೆ.ಹಳ್ಳಿ, ಕೆ.ಆರ್.ಪುರಂ ಸುತ್ತಮುತ್ತಲಿನ ಏರಿಯಾಗಳಲ್ಲಿ ಬೈಕ್ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.