ಬೆಂಗಳೂರು : ಕೋವಿಡ್ ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡು ಆಘಾತ, ಖಿನ್ನತೆ, ಆತಂಕ, ನಿದ್ರಾಹೀನತೆ ಹೀಗೆ ನಾನಾ ರೀತಿಯ ಮಾನಸಿಕ ತೊಳಲಾಟಕ್ಕೆ ತುತ್ತಾದವರಿಗೆ ಉಚಿತವಾಗಿ ಸಲಹಾವಾಣಿ ಆರಂಭಿಸಲಾಗಿದೆ. ಯಲಹಂಕದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ.
ಕೋವಿಡ್ನಿಂದ ಮಾನಸಿಕ ನೆಮ್ಮದಿ ಕಳೆದುಕೊಂಡವರಿಗಾಗಿ ಉಚಿತ ಸಹಾಯವಾಣಿ - ಖಾಸಗಿ ಆಸ್ಪತ್ರೆಯ ಸಿಇಒ ಡಾ. ಜ್ಯೋತಿ ನೀರಜಾ
ಕೋವಿಡ್ ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನ ಕಳೆದುಕೊಂಡು ಆಘಾತ, ಖಿನ್ನತೆ, ಆತಂಕ, ನಿದ್ರಾಹೀನತೆ ಹೀಗೆ ನಾನಾ ರೀತಿಯ ಮಾನಸಿಕ ತೊಳಲಾಟಕ್ಕೆ ತುತ್ತಾದವರಿಗೆ ಸಹಾಯವಾಣಿ ಆರಂಭಿಸಲಾಗಿದೆ..
ಉಚಿತ ಸಹಾಯವಾಣಿ
ಈ ಕುರಿತು ಮಾಹಿತಿ ನೀಡಿದ ಡಾ. ಜ್ಯೋತಿ ನೀರಜಾ, ಹಲವು ಕುಟುಂಬಗಳು ತಮ್ಮವರನ್ನ ಕಳೆದುಕೊಂಡು ಅತೀವ ಆಘಾತಕ್ಕೆ ಒಳಗಾಗಿದ್ದಾರೆ. ಅದರಿಂದ ಹೊರ ಬರದೇ ನಿಸ್ಸಾಹಾಯಕರಾಗಿದ್ದಾರೆ. ಬಹಳಷ್ಟು ಜನ ಅನುಭವಿಸುತ್ತಿರುವುದು ಅನಿರೀಕ್ಷಿತ ಆಘಾತಗಳನ್ನ. ಇದರ ಪರಿಣಾಮವಾಗಿ ನಿತ್ಯವೂ ನೋವು, ಆತಂಕ ಕಾಡುತ್ತಲೇ ಇರುತ್ತದೆ. ಪ್ರೀತಿ ಪಾತ್ರರ ಸಾವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಲೇಬೇಕು ಎಂದಿದ್ದಾರೆ.
ಉಚಿತ ಸಲಹಾವಾಣಿಗೆ ಸಂಬಂಧಿಸಿದಂತೆ ಹೆಚ್ಚಿನ ನೆರವು ಬೇಕಿದ್ದಲ್ಲಿ www.peopletreemaaarga.com ಭೇಟಿ ನೀಡಿ ಅಥವಾ 08046659999 ಕರೆ ಮಾಡಿ ಸಂಪರ್ಕಿಸಬಹುದು.