ಬೆಂಗಳೂರು: ರಸ್ತೆಯಲ್ಲಿ ಬೆತ್ತಲಾಗಿ ಓಡಾಡುತ್ತಾ ಸಾರ್ವಜನಿಕರೆದುರು ಅಸಭ್ಯವಾಗಿ ವರ್ತಿಸುತ್ತಿದ್ದ ವಿದೇಶಿ ಪ್ರಜೆಯನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ಸಂಪಿಗೆಹಳ್ಳಿಯ ಶಿವರಾಮಕಾರಂತ ಬಡಾವಣೆಯ ಪಾರ್ಕ್ ಬಳಿ ಆರೋಪಿಯನ್ನು ಕಂಡು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ವಿದೇಶಿ ಪ್ರಜೆಗೆ ಬುದ್ದಿ ಹೇಳಲು ಯತ್ನಿಸಿದರು. ಆರೋಪಿ ಪೊಲೀಸರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣ ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ.