ಬೆಂಗಳೂರು : ಪಟಾಕಿ ವ್ಯಾಪಾರಿಯ ಕಾರನ್ನು ಅಡ್ಡಗಟ್ಟಿ 20 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಅತ್ತಿಬೆಲೆ ಟೋಲ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.
ಪಟಾಕಿ ವ್ಯಾಪಾರಿ ಚಂದ್ರಶೇಖರ್ ರೆಡ್ಡಿ ಎಂಬುವವರು ತಮ್ಮ ಥಾರ್ ವಾಹನದಲ್ಲಿ 20 ಲಕ್ಷ ರೂಪಾಯಿ ಹಣದೊಂದಿಗೆ ತೆರಳುವಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಚಂದ್ರಶೇಖರ್ ಭುಜಕ್ಕೆ ಹೊಡೆದು ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ. ಬಳಿಕ ಚಂದ್ರಶೇಖರ್ ಅವರ ಮೊಬೈಲ್ ಹಾಗು ಕಾರಿನ ಕೀ ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.