ಕರ್ನಾಟಕ

karnataka

ETV Bharat / state

ಅಂಗಾಂಗ ದಾನ ಮಾಡಿ‌ ಸಾವಿನಲ್ಲೂ ಸಾರ್ಥಕತೆ ಮೆರೆದ ಹಾಸನದ ಯುವ ರೈತ! - man donated his body organs after his death

ಇತ್ತೀಚೆಗೆ ಬ್ರೈನ್ ಹೆಮರೇಜ್​​​ನಿಂದಾಗಿ ಕೋಮಾಗೆ ತಲುಪಿ ಮೆದುಳು ನಿಷ್ಕ್ರಿಯವಾಗಿದ್ದ ವಿಕಾಸ್ ಎಂಬ ರೈತನ ಅಂಗಾಂಗಳನ್ನು ಪೋಷಕರು ದಾನ ಮಾಡಿದ್ದಾರೆ.

farmer
ಅಂಗಾಂಗ ದಾನ ಮಾಡಿ‌ ಸಾವಿನಲ್ಲೂ ಸಾರ್ಥಕತೆ

By

Published : Dec 14, 2019, 7:58 AM IST

ಬೆಂಗಳೂರು: ಇತ್ತೀಚೆಗೆ ಬ್ರೈನ್ ಹೆಮರೇಜ್​​ನಿಂದಾಗಿ ಕೋಮಾಗೆ ತಲುಪಿ ಮೆದುಳು ನಿಷ್ಕ್ರಿಯವಾಗಿದ್ದ ವಿಕಾಸ್ ಎಂಬುವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ.

ಅಂಗಾಂಗ ದಾನ ಮಾಡಿ‌ ಸಾವಿನಲ್ಲೂ ಸಾರ್ಥಕತೆ

ಈ ಮೂಲಕ 30 ವರ್ಷದ ಯುವಕ ವಿಕಾಸ್ ಮೃತಪಟ್ಟರೂ ಆರು ಜನರಿಗೆ ಮರುಜೀವ ನೀಡಿದ್ದಾರೆ. ವಿಕಾಸ್ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಹೊಸಹಳ್ಳಿ ಗ್ರಾಮದ ಪುಟ್ಟಸ್ವಾಮಿಗೌಡ ಹಾಗೂ ದಿ. ಶಶಿಕಲಾ ಅವರ ಪುತ್ರ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 'ಜೀವ ಸಾರ್ಥಕತೆ' ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಗೊರಗುಂಟೆ ಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಗೆ ವಿಕಾಸ್​​ರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಕೋಮಾಗೆ ತಲುಪಿದ್ದರು. ಎಷ್ಟೇ ಸೂಕ್ತ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಅಂಗಾಂಗ ದಾನ ಮಾಡಿ‌ ಸಾವಿನಲ್ಲೂ ಸಾರ್ಥಕತೆ

ABOUT THE AUTHOR

...view details