ಕರ್ನಾಟಕ

karnataka

ETV Bharat / state

ದುಬೈನಲ್ಲಿ ಶಿಕ್ಷೆಗೊಳಗಾದ ಆರೋಪಿಯಿಂದ ಬೆಂಗಳೂರಿನಲ್ಲಿ ಡ್ರಗ್ಸ್​ ಮಾರಾಟ - ಡ್ರಗ್ ಡೆಲಿವರಿ ಮಾಡ್ತಿದ್ದ ಆರೋಪಿ ಮುನಾಫಿಸ್

ದುಬೈನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿಯೊಬ್ಬ ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಮಾಡಿ ಸಿಕ್ಕಬಿದ್ದಿದ್ದಾನೆ.

Dubai return man arrested in Drug case  Drug case at Bengaluru  Police arrested drug seller in Bengaluru  ದುಬೈನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ  ಬೆಂಗಳೂರಿನಲ್ಲಿ ಡ್ರಗ್ಸ್​ ಮಾರಾಟ  ಡ್ರಗ್ ಡೆಲಿವರಿ ಮಾಡ್ತಿದ್ದ ಆರೋಪಿ ಮುನಾಫಿಸ್  ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬೆಂಗಳೂರಿನಲ್ಲಿ ಡ್ರಗ್ಸ್​ ಮಾರಾಟ

By

Published : Aug 25, 2022, 10:16 AM IST

ಬೆಂಗಳೂರು: ದುಬೈನಲ್ಲಿ ಜೈಲು ಸೇರಿ ಕಠಿಣ ಶಿಕ್ಷೆ ಅನುಭವಿಸಿದರೂ ಬುದ್ದಿ ಬಿಡದ ಆರೋಪಿಯೊಬ್ಬ ಈಗ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮುನಾಫಿಸ್ ಎಂಬಾತನೇ ಬಂಧಿತ ಆರೋಪಿ. 2018ರಲ್ಲಿ ದುಬೈನ ಕಂಪನಿಯೊಂದರಲ್ಲಿ ಮುನಾಫೀಸ್ ಸೇಲ್ಸ್ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡ್ತಿದ್ದ. ನಂತರ ದುಬೈನಲ್ಲಿ ಡ್ರಗ್ ಮಾರಾಟಕ್ಕಿಳಿದು ಅಲ್ಲಿನ ಪೊಲೀಸರ ಕೈಗೆ ಸಿಕ್ಕಿ ಮೂರು ವರ್ಷ ಎಂಟು ತಿಂಗಳು ಜೈಲು ಸೇರಿದ್ದ. ನಂತರ ಅಲ್ಲಿಂದ ಹೊರಹಾಕಿದ ಬಳಿಕ ನೇರವಾಗಿ ಕಾಸರಗೋಡಿಗೆ ಬಂದು ನಂತರ ಬೆಂಗಳೂರು ಸೇರಿಕೊಂಡಿದ್ದ.

ಬೆಂಗಳೂರಿಗೆ ಬಂದ ಮುನಾಸಿಫ್​ ಹೆಚ್ಚಿನ ಹಣ ಗಳಿಸಲು ಡ್ರಗ್ಸ್ ದಂಧೆ ಶುರುಮಾಡಿದ್ದ. ಟೆಲಿಗ್ರಾಮ್​ನಲ್ಲಿ ಮೇಸೆಜ್ ಬರುತ್ತಿದ್ದಂತೆ ಡ್ರಗ್ ಡೆಲಿವರಿ ಮಾಡ್ತಿದ್ದ ಆರೋಪಿ ಮುನಾಫಿಸ್​. ಪ್ರಮುಖವಾಗಿ ಕೇರಳ ಮೂಲದ ಐಟಿ ಬಿಟಿ ಉದ್ಯೋಗಿಗಳಿಗೆ ಈತ ಡ್ರಗ್ ಮಾರುತ್ತಿದ್ದ. ಮಾದಕ ವಸ್ತು ಮಾರಾಟ ಮಾಡ್ತಿದ್ದಾನೆಂಬ ಮಾಹಿತಿ ಸಿಕ್ಕ ಕೂಡಲೇ ಬಾಣಸವಾಡಿ ಪೊಲೀಸ್ ಇನ್ಸ್​ಪೆಕ್ಟರ್​ ಸಂತೋಷ್ ಆ್ಯಂಡ್ ಟೀಂ ಗ್ರಾಹಕರಂತೆ ನಟಿಸಿ ಆರೋಪಿ ಮುನಾಫೀಸ್​ನನ್ನ ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿಯಿಂದ 38 ಲಕ್ಷ ಮೌಲ್ಯದ 700 ಗ್ರಾಂ ಎಂಡಿಎಂಎ ಕ್ರಿಷ್ಟಲ್​​ನ​ನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ: ₹1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ

ABOUT THE AUTHOR

...view details