ಕರ್ನಾಟಕ

karnataka

ETV Bharat / state

ಎಣ್ಣೆ ಏಟಲ್ಲಿ ಸ್ನೇಹಿತನ ತಲೆಗೆ ದೊಣ್ಣೆಯೇಟು... ರಕ್ತ ಬರಲಿಲ್ಲ ಅಂತ ಸುಮ್ನಾದ್ರು, ಆದ್ರೆ ಆಗಿದ್ದೇ ಬೇರೆ - man died bnaglore

ಕುಡಿದ ನಶೆಯಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜೀವನ್ ಭೀಮಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

banglore
ಕುಡಿದ ನಶೆಯಲ್ಲಿ ಸ್ನೇಹಿತನ ಮೇಲೆ ಹಲ್ಲೆ

By

Published : May 5, 2020, 9:13 AM IST

ಬೆಂಗಳೂರು: ಕುಡಿದ ನಶೆಯಲ್ಲಿ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಜೀವನ್ ಭೀಮಾ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀನಿವಾಸ್ (45)ವರ್ಷ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸರ್ಕಾರ ಮದ್ಯ ಮಾರಾಟ ಮಾಡಲು ಅವಕಾಶ ಕೊಟ್ಟ ಹಿನ್ನೆಲೆ ಸೋಮವಾರ ಬೆಳಗ್ಗೆ ವೈನ್ ಶಾಪ್ ಓಪನ್ ಆಗಿದ್ದ ಕೂಡಲೇ ಕ್ಯೂ ನಿಂತು ಶ್ರೀನಿವಾಸ್ ಮತ್ತು ಸ್ನೇಹಿತರು ಮದ್ಯ ಖರೀದಿಸಿದ್ದರು. ಬಳಿಕ ರೂಮ್​​ನಲ್ಲಿ ಎಣ್ಣೆ ಏಟಿನಲ್ಲಿದ್ದ ಸಂತೋಷ್ ಮತ್ತು ಶ್ರೀನಿವಾಸ್ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಈ ವೇಳೆ ದೊಣ್ಣೆಯಿಂದ ಶ್ರೀನಿವಾಸ್ ತಲೆಗೆ ಬಲವಾಗಿ ಸಂತೋಷ್ ಹೊಡೆದಿದ್ದ.

ಹೀಗಾಗಿ ಅಲ್ಲೆ‌ ಇದ್ದ ಸ್ನೇಹಿತರು ಶ್ರೀನಿವಾಸ್​ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ತಲೆಯಲ್ಲಿ ರಕ್ತ ಬಾರದ ಕಾರ‌ಣ ಮತ್ತೆ ಸಾಮಾನ್ಯ ಚಿಕಿತ್ಸೆ ಕೊಡಿಸಿ ಮನೆಗೆ ಕರೆ ತಂದಿದ್ದಾರೆ. ಆದರೆ ಶ್ರೀನಿವಾಸ್​​ ತಲೆಯಲ್ಲಿ ಆಂತರಿಕ ರಕ್ತಸ್ರಾವವಾಗಿ ಮನೆಯಲ್ಲೆ ಮೃತಪಟ್ಟಿದ್ದಾನೆ.

ಇನ್ನು ಈ ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಜೀವನ್ ಭೀಮಾನಗರ ಪೊಲೀಸರು ಪ್ರಕರಣ ದಾಖಲಿಸಿ‌ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ABOUT THE AUTHOR

...view details