ಕರ್ನಾಟಕ

karnataka

ETV Bharat / state

ಕಾವೇರಿ ವಿವಾದ: ಮಂಡ್ಯದಿಂದ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡಿದ ಶ್ವಾನ!

ಕಾವೇರಿ ವಿಚಾರವಾಗಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಫ್ರೀಡಂ ಪಾರ್ಕ್​ ವರೆಗೆ ಶ್ವಾನವೊಂದು ಪಾದಯಾತ್ರೆ ಮಾಡಿ ಗಮನ ಸೆಳೆಯಿತು.

ವಿನೂತನ ಪ್ರತಿಭಟನೆ
ವಿನೂತನ ಪ್ರತಿಭಟನೆ

By ETV Bharat Karnataka Team

Published : Sep 29, 2023, 2:48 PM IST

Updated : Sep 29, 2023, 9:31 PM IST

ಪ್ರತಿಭಟನೆಯಲ್ಲಿ ಭಾಗಿಯಾದ ಶ್ವಾನ

ಬೆಂಗಳೂರು:ರಾಜ್ಯಾದ್ಯಂತ ಕಾವೇರಿ ಹೋರಾಟ ಕಾವು ಪಡೆದುಕೊಂಡಿದೆ. ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬಂದ್ ಘೋಷಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಕರ್ನಾಟಕ ಬಂದ್ ಪ್ರಯುಕ್ತ ಹಲವು ಕನ್ನಡ ಪರ, ದಲಿತ ಪರ ಹಾಗೂ ರೈತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ತಮಿಳುನಾಡು ವಿರೋಧಿ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಲಾಯಿತು. ಮತ್ತೊಂದೆಡೆ ಮಂಡ್ಯದಿಂದ ರೈತರಿಗೋಸ್ಕರ ಫ್ರೀಡಂ ಪಾರ್ಕ್​ಗೆ ಬಂದ ಶ್ವಾನ ರಾಂಬೋ ಎಲ್ಲರ ಗಮನ ಸೆಳೆಯಿತು.

ಬೆಂಗಳೂರಿಗೆ ಪಾದಯಾತ್ರೆ ಮೂಲಕ ಬಂದ ರಾಂಬೊ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಂಪೂರ್ಣ ಬೆಂಬಲ ನೀಡುವಂತೆ ಕೋರಿಕೆ ಇಟ್ಟಿತ್ತು. ಕರ್ನಾಟಕ ಬಂದ್​ಗೆ ರೈತ ಬಾಂಧವರಿಗಾಗಿ ಸಂಘ ಸಂಸ್ಥೆಗಳ ಬೆಂಬಲ ಕೋರಿತು. ಬಾಯಲ್ಲಿ ಪ್ರತಿಕೃತಿ ಹಿಡಿದು ಶ್ವಾನ ಸಾಗಿತು. ಶ್ವಾನವು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಮಸ್ತ ಕನ್ನಡಿಗರ ಪರವಾಗಿ ಸಲ್ಲಿಸಲಿದೆ. ಅದನ್ನು ಆಶೀರ್ವದಿಸಿ ಹೊರಾಟಗಾರರು ಕಳುಹಿಸಿಕೊಟ್ಟರು.

ಮಿನರಲ್​ ವಾಟರ್​ ಸ್ನಾನ: ಪ್ರತಿಭಟನಾಕಾರರೊಬ್ಬರು ಫ್ರೀಡಂ ಪಾರ್ಕ್​ ಮುಂದೆ ಮಿನರಲ್​ ವಾಟರ್​ನಿಂದಲೇ ಸ್ನಾನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರಿಲ್ಲ ಹಾಗಾಗಿ ಮಿನರಲ್​ ವಾಟರ್​ ಬಳಕೆ ಮಾಡಿ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ ಎಂದು ಸಿಟ್ಟು ತೋರಿಸಿದ ಪ್ರತಿಭಟನಾಕಾರರು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಮಿನರಲ್​ ವಾಟರ್​ ಸ್ನಾನ ಮಾಡಿ ಆಕ್ರೋಶ

ಮತ್ತೊಂದೆಡೆ ಕರ್ನಾಟಕ ಬಂದ್ ಹಿನ್ನೆಲೆ ಬೆ.ಮ.ಸಾ ಸಂಸ್ಥೆಯ 5602 ಬಸ್​​ಗಳ ಪೈಕಿ 3587 ಬಸ್​ಗಳು ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಬಂದ್​ ಕಾರಣ ಸಾರ್ವಜನಿಕ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಬಸ್​ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಬಿಎಂಟಿಸಿ ತಿಳಿಸಿದೆ.

ಆಪ್​ ಕಾರ್ಯಕರ್ತರ ಪ್ರತಿಭಟನೆ:ಕಾವೇರಿ ವಿಚಾರವಾಗಿಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ರಾಜ್ಯ ಕಚೇರಿಯ ಮುಂದೆ ಕಾರ್ಯಕರ್ತರು ಜಮಾವಣೆಯಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕರ್ನಾಟಕ ಬಂದ್: ಬುರ್ಖಾ ಧರಿಸಿ, ಖಾಲಿ ಬಿಂದಿಗೆ ಹೊತ್ತು ಪ್ರತಿಭಟನೆಗೆ ಬಂದ ವಾಟಾಳ್ ನಾಗರಾಜ್...

Last Updated : Sep 29, 2023, 9:31 PM IST

ABOUT THE AUTHOR

...view details