ನೆಲಮಂಗಲ:ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆ ಕಣ್ಣು ನೋವು ವಾಸಿಯಾಗದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಣ್ಣು ನೋವು ವಾಸಿಯಾಗದಿದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಮಹಿಳೆ - ಆತ್ಮಹತ್ಯೆಗೆ ಶರಣಾದ ಮಹಿಳೆ
ನೆಲಮಂಗಲದಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆ ಕಣ್ಣು ನೋವು ವಾಸಿಯಾಗದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆ
ಬೆಂಗಳೂರು ಹೊರವಲಯದ ನಾಗರಬಾವಿಯ ಆಂಜಿನಪ್ಪ ಪತ್ನಿ ಗಂಗಮ್ಮ (55) ನೇಣಿಗೆ ಶರಣಾದ ಮಹಿಳೆ. ಆಕೆಯ ಪತಿಗೆ ಅಪಘಾತವಾಗಿತ್ತು. ಇದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದರು. ಇದರ ಜೊತೆಗೆ ಕಣ್ಣು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಣ್ಣು ನೋವು ವಾಸಿಯಾಗದಿದ್ದಕ್ಕೆ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾರೆ.ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.