ಬೆಂಗಳೂರು: ಮುಖ್ಯಮಂತ್ರಿ ಭೇಟಿ ಬಳಿಕ ಸಿದ್ಧಲಿಂಗಾ ಮಠದ ಲಿಂಗಾಯತ ಶ್ರೀಗಳ ನಿಯೋಗ, ಬಿ.ಎಸ್.ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರಬೇಕು ಎಂದು ಅಭಿಪ್ರಾಯಪಟ್ಟಿದೆ.
ಸಿಎಂ ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದಗಂಗಾ ಶ್ರೀಗಳು, ಯಡಿಯೂರಪ್ಪ ಸಮರ್ಥವಾಗಿ ಕೆಲಸ ಮಾಡ್ತಿದ್ದಾರೆ. ಕಳೆದೊಂದು ವಾರದಿಂದ ಸಿಎಂ ಬದಲಾವಣೆ ಬಗ್ಗೆ ಸುದ್ದಿ ಬರುತ್ತಿದೆ. ಶಕ್ತಿ ಮೀರಿ ಕೆಲಸ ಮಾಡುವ ಅವರನ್ನು ಯಾಕೆ ಬದಲಾವಣೆ ಮಾಡ್ತಾರೆ ಎಂದು ಕೇಳಿದರು.
ಇದನ್ನೂಓದಿ: BSY ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸರಿಯಲ್ಲ: ಮನಗೂಳಿಶ್ರೀ
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬಾರದು, ಅವರು ಅಧಿಕಾರಾವಧಿ ಪೂರ್ಣಗೊಳಿಸಬೇಕು ಎಂದು ನಾವೆಲ್ಲರೂ ಬಂದಿದ್ದೇವೆ. ರಾಜೀನಾಮೆ ಬಗ್ಗೆ ಯಡಿಯೂರಪ್ಪ ಏನೂ ಹೇಳಿಲ್ಲ. ನಾವೆಲ್ಲರೂ ಇಷ್ಟೇ ಹೇಳೋದು ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಬೇಕು. ಇವಾಗ ಸಂದಿಗ್ಧ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಮಾಡೋದು ಸರಿಯಲ್ಲ ಎಂದರು.
ನಾವು ಯಾರು ರಾಜಕಾರಣಿಗಳ ಜೊತೆ ಓಡಾಡ್ತಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಬೇಕು ಎಂಬ ಅಪೇಕ್ಷೆ ನಮ್ಮದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಇಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಆಗುವ ತೀರ್ಮಾನವೇ ಸಿಎಂ ನಿರ್ಧಾರ ಆಗೋದು ಎಂದರು.
ಇದನ್ನೂ ಓದಿ:ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್ವೈ ಜೊತೆ ಮಹತ್ವದ ಚರ್ಚೆ