ಬೆಂಗಳೂರು: ಬಸವೇಶ್ವರ ನಗರದ 13ನೇ ಅಡ್ಡರಸ್ತೆಯಲ್ಲಿ ಅಂಬೇಡ್ಕರ್ ಸ್ಟೇಡಿಯಂ ಬಳಿ ಅನಾಥ ಶವವೊಂದು ಪತ್ತೆಯಾಗಿದೆ.
ಬೆಂಗಳೂರಿನ ರಸ್ತೆ ಮೇಲೆಯೇ ಅನಾಥ ಶವ... ಕೊರೊನಾ ಭೀತಿಯಿಂದ ಹತ್ತಿರ ಸುಳಿಯುತ್ತಿಲ್ಲ ಜನ! - ಬೆಂಗಳೂರಿನಲ್ಲಿ ಮೃತದೇಹ ಪತ್ತೆ,
ಬೆಂಗಳೂರಲ್ಲಿ ಅನಾಥ ಶವವೊಂದು ಪತ್ತೆಯಾಗಿದ್ದು, ಇದನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಕೊರೊನಾ ಭೀತಿ ಹಿನ್ನೆಲೆ ಯಾರೂ ಕೂಡ ಮೃತದೇಹದ ಬಳಿ ಸುಳಿಯುತ್ತಿಲ್ಲ.

ಬೆಂಗಳೂರಿನ ರಸ್ತೆ ಮೇಲೆಯೇ ಬಿದ್ದಿರುವ ಅನಾಥ ಶವ
ಬೆಂಗಳೂರಿನ ರಸ್ತೆ ಮೇಲೆಯೇ ಬಿದ್ದಿರುವ ಅನಾಥ ಶವ...!
ಪೊಲೀಸರು ಶವದ ಮೇಲೆ ಕೆಂಪು ಬಟ್ಟೆ ಹೊದಿಸಿದ್ದಾರೆ. ಅನಾಥ ಶವಕಂಡು ಕೊರೊನಾ ಭೀತಿ ಹಿನ್ನೆಲೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ದೂರದಿಂದಲೇ ವೀಕ್ಷಿಸುತ್ತಿದ್ದಾರೆ.
ಪೊಲೀಸರು ಆ್ಯಂಬುಲೆನ್ಸ್ಗಾಗಿ ಕರೆ ಮಾಡಿದ್ದು, ಅದರ ಆಗಮನಕ್ಕಾಗಿ ಕಾಯ್ತಿದ್ದಾರೆ. ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದಾನೆಯೋ ಅಥವಾ ಅನಾರೋಗ್ಯದಿಂದ ಸಾವು ಸಂಭವಿಸಿದೆಯಾ ಎಂಬ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ.