ಕರ್ನಾಟಕ

karnataka

ETV Bharat / state

ಗ್ಯಾಸ್ ಫಿಲ್ಲಿಂಗ್ ವೇಳೆ ಸಿಲಿಂಡರ್​ ಸ್ಫೋಟ.. ಎರಡು ಅಂಗಡಿ ನಾಶ, ಓರ್ವನ ಸ್ಥಿತಿ ಗಂಭೀರ - ಆನೇಕಲ್

ಸ್ಟೌವ್ ರಿಪೇರಿ ಮಾಡುವ ಅಂಗಡಿಯಲ್ಲಿ ಸಿಲಿಂಡರ್​ ಸ್ಫೋಟಗೊಂಡು ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಡೆದಿದೆ.

cylinder
ಸಿಸಿಟಿವಿ ದೃಶ್ಯ

By

Published : Apr 18, 2023, 9:36 AM IST

Updated : Apr 18, 2023, 1:18 PM IST

ಸಿಸಿಟಿವಿಯಲ್ಲಿ ಸೆರೆಯಾಗಿರುವ ಸಿಲಿಂಡರ್​ ಸ್ಫೋಟ ದೃಶ್ಯ

ಆನೇಕಲ್(ಬೆಂಗಳೂರು):ಗ್ಯಾಸ್ ಫಿಲ್ಲಿಂಗ್ ಗಡಿ ಸ್ಫೋಟಗೊಂಡು ಇಡೀ ಅಂಗಡಿಯೇ ಧ್ವಂಸವಾಗಿರುವ ಘಟನೆ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಸರ್ಕಲ್ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮಕ್ಕೆ ಎರೆಡು ಅಂಗಡಿಗಳು ನೆಲಸಮಗೊಂಡಿವೆ. ಅಲ್ಲದೆ ಎದುರು 100 ಮೀಟರ್ ಅಂತರದ ಶೆಟರ್​ಗೆ ರಾಡ್ ಬಡಿದು ಎರೆಡು ಅಂಗಡಿಗಳ ರೋಲಿಂಗ್ ಶೆಟರ್ ಹಾಳಾಗಿದೆ. ಅಂಗಡಿ ಮಾಲೀಕ ಎಂದಿನಂತೆ ಅಂಗಡಿಯನ್ನು ಮುಚ್ಚಿ ಬೀಗ ಹಾಕಿ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಮುತ್ತಾನಲ್ಲೂರು‌ ಬಸ್ ನಿಲ್ದಾಣದ ಲಲಿತಮ್ಮ ಬಿಲ್ಡಿಂಗ್​ನಲ್ಲಿ ಗ್ಯಾಸ್ ತುಂಬುವ ಕೆಲಸ ಮಾಡುತ್ತಿದ್ದ ವ್ಯಕ್ತಿ ಘಟನಾ ಸಂದರ್ಭದಲ್ಲಿ ಅಂಗಡಿ ಪಕ್ಕದಲ್ಲಿ ಮಲಗಿದ್ದ ಪರಿಣಾಮ ಈತನಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತಡ ರಾತ್ರಿ ಸ್ಫೋಟಗೊಂಡ ಶಬ್ದಕ್ಕೆ ಮುತ್ತಾನಲ್ಲೂತು ಗ್ರಾಮಸ್ಥರು ಬೆಚ್ಚಿ ಬಿದ್ದು ಹೊರಗೆ ಬಂದು ನೋಡಿದಾಗ ವಿಷಯ ಬಹಿರಂಗಗೊಂಡಿದೆ.

ಇದನ್ನೂ ಓದಿ:ಮುಂಬೈಗೆ ತೆರಳಿದ್ದ ಪತಿ.. ಬೆಂಗಳೂರಲ್ಲಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಪತ್ನಿ ಸಾವು

ಸೋಮವಾರ ಮದ್ಯರಾತ್ರಿ ಗ್ಯಾಸ್ ತುಂಬುವಲ್ಲಿ ಆಕಸ್ಮಿಕವಾಗಿ ಸೋರಿಕೆಯಾಗಿ ಬಿಲ್ಡಿಂಗ್ ಸ್ಫೋಟಗೊಂಡು ಪಕ್ಕದ ಎರಡು ಶೀಟ್ ಬಿಲ್ಡಿಂಗ್ ನೆಲಕ್ಕೆ ಉರುಳಿದೆ. ಇವಿಷ್ಟು ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಆಂಬ್ಯುಲೆನ್ಸ್ ಹಾಗು ಸೂರ್ಯನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಿಆರ್​ಎಸ್​ ಪಾರ್ಟಿಯಲ್ಲಿ ಸ್ಫೋಟಗೊಂಡಿತ್ತು ಗ್ಯಾಸ್​ ಸಿಲಿಂಡರ್​:ತೆಲಂಗಾಣದ ಖಮ್ಮಂನಲ್ಲಿ ಇತ್ತೀಚೆಗೆ ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಲ್ಲದೆ 8 ಜನ ಗಾಯಗೊಂಡಿರುವ ಘಟನೆ ನಡೆದಿತ್ತು. ಖಮ್ಮಂ ಜಿಲ್ಲೆಯ ಚಿಮ್ಮಲಪಾಡು ಗ್ರಾಮದಲ್ಲಿ ಬಿಆರ್​ಎಸ್​ ಪಾರ್ಟಿ ಆಯೋಜಿಸಿದ್ದ ಆತ್ಮೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಈ ದುರ್ಘಟನೆ ಸಂಭವಿಸಿತ್ತು.

ಕಾರ್ಯಕ್ರಮಕ್ಕೆ ಮುಖಂಡರ ಆಗಮನದ ವೇಳೆ ಸಿಡಿಸಿದ ಪಟಾಕಿಯಿಂದ ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡು ಗ್ಯಾಸ್​ ಸಿಲಿಂಡರ್​ ಸ್ಫೋಟಗೊಂಡಿತ್ತು. ಏಕಾಏಕಿ ಸಿಲಿಂಡರ್​ ಸ್ಫೋಟದಿಂದ ಅಲ್ಲೇ ಸ್ಥಳದಲ್ಲಿದ್ದ ಎಂಟು ಮಂದಿ ಗಂಭೀರ ಗಾಯಗೊಂಡಿದ್ದರೇ, ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ತಕ್ಷಣವೇ ಗಾಯಾಳುಗಳನ್ನು ಪೊಲೀಸ್​ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಓರ್ವ ಸಾವನ್ನಪ್ಪಿದ್ದರೆ, ಇನ್ನೋರ್ವ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದ.

ಇದನ್ನೂ ಓದಿ:ಗ್ಯಾಸ್​ ಬಲೂನ್​ ಸಿಲಿಂಡರ್​ ಸ್ಫೋಟ: ನಾಲ್ಕು ಸಾವು, ಹತ್ತು ಮಂದಿಗೆ ಗಾಯ

ಗ್ಯಾಸ್​ ಬಲೂನ್​ ಸಿಲಿಂಡರ್​ ಸ್ಫೋಟಗೊಂಡು 4 ಸಾವು: ಫೆಬ್ರವರಿ 12 ರ ರಾತ್ರಿ ಪಶ್ಚಿಮ ಬಂಗಾಳದ ಜೋಯ್​ನಗರದಲ್ಲಿ ಜಾತ್ರೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗ್ಯಾಸ್​ ಬಲೂನ್​ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಓರ್ವ ವೃದ್ಧ ಮತ್ತು ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು. ಅಲ್ಲದೇ ಸ್ಫೋಟದಿಂದ 10 ಜನ ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ:ಬಟಿಂಡಾ ಸೇನಾ ನೆಲೆಯಲ್ಲಿ ಯೋಧರ ಹತ್ಯೆ ಪ್ರಕರಣ: ಬೆಳಕಿಗೆ ಬಂತು ಸತ್ಯ ಸಂಗತಿ!

Last Updated : Apr 18, 2023, 1:18 PM IST

ABOUT THE AUTHOR

...view details