ಬೆಂಗಳೂರು:ರಾಜ್ಯದ ಜನರಿಗೆ ಆರೋಗ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇದ್ದ ಕುಟುಂಬಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖ ಆಗುವಂತೆ ಮಾಡಿದೆ.
ಕೊರೊನಾ ಸೋಂಕು ತಗುಲಿದ್ದ ಕುಟುಂಬ ಗುಣಮುಖ... ರಾಜ್ಯ ಆರೋಗ್ಯ ಇಲಾಖೆಗೆ ಕೃತಜ್ಞತೆ - ಕೊರೊನಾ ಅಪ್ಡೇಟ್
ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇದ್ದ ಕುಟುಂಬ ಈಗ ಗುಣಮುಖವಾಗಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಆರೈಕೆ ಬಗ್ಗೆ ಪತ್ರ ಬರೆದು ಧನ್ಯವಾದ ತಿಳಿಸಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಆರೈಕೆ ಬಗ್ಗೆ ಪತ್ರ ಬರೆದಿರುವ 0ಕೋವಿಡ್-19 ಪಾಸಿಟಿವ್ ಹೊಂದಿದ್ದ ಮಹಿಳೆ, 'ಕೊರೊನಾ ಸೋಂಕಿತರೆಂದು ತಿಳಿದ ಮೇಲೆ ನಮ್ಮನ್ನು ಪ್ರತ್ಯೇಕವಾಗಿಟ್ಟು ತುಂಬಾ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಡಾಕ್ಟರ್, ನರ್ಸ್ಗಳು, ಸಿಬ್ಬಂದಿ ಪ್ರತಿ ಅಗತ್ಯಗಳಿಗೂ ನಮ್ಮ ಬಳಿಯೇ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ರು. ಅಲ್ಲದೆ ಆಸ್ಪತ್ರೆ ವಾತಾವರಣ ನೈರ್ಮಲ್ಯವಾಗಿತ್ತು. ಪ್ರಥಮವಾಗಿ ಪತಿಗೆ ಕೊರೊನಾ ಪಾಸಿಟಿವ್ ಬಂದ ಕೂಡಲೇ ಕುಟುಂಬ, ಸ್ನೇಹಿತರು, ಮಕ್ಕಳ ಸ್ನೇಹಿತರು ಎಲ್ಲರನ್ನೂ ರಾಜ್ಯ ಆರೋಗ್ಯ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದರು. ಒಟ್ಟಿನಲ್ಲಿ ಸ್ವಲ್ಪವೂ ವಿರಾಮ ತೆಗೆದುಕೊಳ್ಳದೆ ನಮ್ಮನ್ನು ರಕ್ಷಿಸಿದ ಸರ್ಕಾರ, ವೈದ್ಯರು, ನರ್ಸ್ಗಳು, ಸಿಬ್ಬಂದಿಗೆ ಧನ್ಯವಾದ' ಹೇಳಿದೆ ಈ ಕುಟುಂಬ.