ಕರ್ನಾಟಕ

karnataka

ETV Bharat / state

ಡೇಟಿಂಗ್​ಗಾಗಿ ಮೀಟ್​ ಮಾಡಿದ್ದ ಪಬ್​ ಪ್ರಿಯ ಜೋಡಿ ಹೆಣವಾದ್ರು... ಸಿಸಿ ಕ್ಯಾಮೆರಾದಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಸೆರೆ - Kannada news paper

ಕೆ.ಆರ್.ಪುರಂ ಮೂಲದ ವೇದಾ ಕಳೆದ ವರ್ಷ ವೈಯಕ್ತಿಕ ಕಾರಣದಿಂದ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳಂತೆ, ಹಾಗೂ ಶಿವಮೊಗ್ಗ ಮೂಲದ ಪವನ್ ಹೆಂಡತಿಯೊಂದಿಗೆ ಜಗಳವಾಗಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ.

ಪಬ್ ಪ್ರಕರಣ, ಡೇಟಿಂಗ್ ಗಾಗಿ ಮೀಟಿಂಗ್ ಮಾಡಿದ್ದರಂತೆ

By

Published : Jun 22, 2019, 1:53 PM IST

ಬೆಂಗಳೂರು:ಚರ್ಚ್ ಸ್ಟ್ರೀಟ್ ನ ಪಬ್ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಯುವ ಜೋಡಿಗಳಿಬ್ಬರು ಡೇಟಿಂಗ್ ಗಾಗಿ ಪಬ್ ಗೆ ಬಂದಿದ್ದರು ಎಂಬ ವಿಚಾರ ಬಹಿರಂಗವಾಗಿದೆ.

ಕೆ.ಆರ್.ಪುರ ಮೂಲದ ವೇದಾ (30) ಕಳೆದ ವರ್ಷ ವೈಯಕ್ತಿಕ ಕಾರಣದಿಂದ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳಂತೆ, ಹಾಗೂ ಶಿವಮೊಗ್ಗ ಮೂಲದ ಪವನ್(36) ಹೆಂಡತಿಯೊಂದಿಗೆ ಜಗಳವಾಗಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಎಂದು ತಿಳಿದು ಬಂದಿದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ‌ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿ‌‌ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಪಬ್ ಪ್ರಕರಣ, ಡೇಟಿಂಗ್ ಗಾಗಿ ಮೀಟಿಂಗ್ ಮಾಡಿದ್ದರಂತೆ

ಪ್ರಕರಣದ ಬಗ್ಗೆ ಮಾತನಾಡಿದ ಡಿಸಿಪಿ ದೇವರಾಜ್, ನಿನ್ನೆ ರಾತ್ರಿ 11:30ರ ಸಮಯದಲ್ಲಿ ಆ್ಯಶ್ ಬಿಯರ್ ಪಬ್ ನಲ್ಲಿ ಇಬ್ಬರೂ ಸಾವನ್ನಪ್ಪಿದ್ದು, ಊಟ ಮುಗಿಸಿ ಬರಬೇಕಾದ್ರೆ ಸ್ಟೆಪ್ಸ್ ಇಳಿಯುವಾಗ ಹುಡುಗಿ ಕಾಲುಜಾರಿದ್ದು ಮುಂದೆ ಇದ್ದ ಹುಡುಗನ ಮೇಲೆ ಬಿದ್ದಿದ್ದಾಳೆ ಇದರಿಂದ ಇಬ್ಬರೂ ಕೆಳಗೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳೀಯ ನಿವಾಸಿ ದೀಪಕ್ ರಾವ್ ಎಂಬುವವರು ನೀಡಿದ ದೂರಿನ ಮೇಲೆ, ಬಿಲ್ಡಿಂಗ್ ಓನರ್ ಮತ್ತು ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಸದ್ಯ ಮಾನೇಜರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ, ಸಿಸಿಟಿವಿ‌ ಪರಿಶಿಲನೆ ನಡೆಸಿದ್ದು ತನಿಖೆ ಮುಂದುವರೆದಿದೆ ಎಂದರು.

ABOUT THE AUTHOR

...view details