ಬೆಂಗಳೂರು:ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ ಎಂದಿರುವುದಕ್ಕೆ ಕೋಪಗೊಂಡ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಏ.5ರಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆದರೆ ಪ್ರಕರಣದಲ್ಲಿ ದೂರು ಕೊಟ್ಟ ವ್ತಕ್ತಿಯೇ ಇಲ್ಲಿ ಆರೋಪಿ ಸ್ಥಾನದಲ್ಲಿದ್ದಾನೆ.
ಸಯ್ಯದ್ ಫಿರ್ದೋಸ್ ಎಂಬುವರು ನೀಡಿದ ದೂರಿನ ಮೇರೆಗೆ ಮೌಲಾನ ಪಾಷಾ ಎಂಬಾತನನ್ನು ಬಂಧಿಸಲಾಗಿದೆ.
ವಿಲ್ಸನ್ ಗಾರ್ಡನ್ ಬಳಿಯ ಬಡಾಮಖಾನ್ ಮೈದಾನದ ಪಕ್ಕದಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಗುಂಡಿ ತೆಗೆಯುವ ಕೆಲಸವನ್ನು ಸಯ್ಯದ್ ಮಾಡುತ್ತಿದ್ದ. ಕೊರೊನಾ ಬಿಕ್ಕಟ್ಟು ನಡುವೆಯೂ ಗುಂಡಿ ತೆಗೆಯಲು ಐದಾರು ಸಾವಿರ ರೂಪಾಯಿಗಿಂತ ಹೆಚ್ಚು ಹಣ ತೆಗೆದುಕೊಳ್ಳುತ್ತಿದ್ದ. ಈ ವಿಷಯ ಅರಿತ ಆರೋಪಿ ಮೌಲಾನಾ ಪಾಷಾ ಸಹಚರರು ಹೋಗಿ ಜನರಿಂದ ಅಂತ್ಯಕ್ರಿಯೆಗೆ ಗುಂಡಿ ತೋಡಲು ಹೆಚ್ಚಿನ ಮೊತ್ತದಲ್ಲಿ ಹಣ ಪಡೆಯುತ್ತಿದ್ದೀಯಾ. ಹೀಗಾಗಿ ಒಂದು ಗುಂಡಿ ತೋಡಲು ನನಗೆ 1 ಸಾವಿರ ರೂ ನೀಡಬೇಕು ಹಾಗು ತಿಂಗಳಿಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಸ್ಮಶಾನ ಮುಂದೆ ಹೆಚ್ಚುವರಿ ಹಣ ಕೊಡಬಾರದೆಂದು ಸೂಚಿಸುವ ನಾಮಫಲಕ ಹಾಕಲು ಮುಂದಾಗಿದ್ದರು. ಅಲ್ಲದೆ ಸಯ್ಯದ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು.
ಇದನ್ನೂ ಓದಿ: ಅಂತ್ಯಕ್ರಿಯೆ ನಡೆಸಲು ಕಡಿಮೆ ಹಣ ತೆಗೆದುಕೊಳ್ಳಿ ಎಂದಿದ್ದಕ್ಕೆ ಸುತ್ತಿಗೆಯಿಂದ ಹಲ್ಲೆ
15 ದಿನಗಳ ಹಿಂದೆಯೂ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ಶಾಹಿದ್ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಈ ಸಂಬಂಧ ಹಲ್ಲೆ ಆರೋಪದಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗಲಾಟೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಗುಂಡಿ ತೊಡುವ ವ್ಯಕ್ತಿಯಿಂದ ಹಣ ವಸೂಲಿಗೆ ಇಳಿದಿದ್ದ, ಸುಲಿಗೆ ಪ್ರಕರಣದಲ್ಲಿ ಮೊದಲ ಪ್ರಕರಣದ ದೂರುದಾರನಾಗಿರುವ ಮೌಲಾನಪಾಷಾನನ್ನು ಬಂಧಿಸಿದ್ದಾರೆ.