ಬೆಂಗಳೂರು:ರಾಜಕೀಯ ನಾಯಕರಿಗೆ ಚಿನ್ನ ಬೇಕು ಎಂದು ಹೇಳಿ, ಚಿನ್ನದ ವ್ಯಾಪಾರಿಯಿಂದ 3 ಕೆಜಿ ಚಿನ್ನ ಹಾಗೂ 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ವಿಶಾಲ್ ಜೈನ್ ಎಂಬ ಚಿನ್ನದ ವ್ಯಾಪಾರಿಗೆ ವಂಚಿಸಿರುವ ಆರೋಪಿಗಳಾದ ಅಭಯ್ ಜೈನ್, ಕಿರಣ್, ಸಂಕೇತ್, ನವೀನ್ ಮತ್ತು ಚರಣ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸ್ತುತ ಅಭಯ್ ಜೈನ್ ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಬೇರೆ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್ಶಿಪ್... ಆರೋಗ್ಯ ತಪಾಸಣೆಗೆ ಬಂದ ಗರ್ಭಿಣಿ ಪತ್ನಿಯ ಕೊಂದ ಪತಿ
ವಿಶಾಲ್ ಜೈನ್ ಬಳಿ ಒಂದು ಕೆಜಿ ಚಿನ್ನ ಬೇಕು ಎಂದು ಪಡೆದಿದ್ದ ಆರೋಪಿಗಳು, ನಂತರ ಶಾಂಗ್ರೀಲಾ ಹೋಟೆಲ್ನಲ್ಲಿ ಮತ್ತೊಮ್ಮೆ ಭೇಟಿಯಾಗಿ ರಾಜಕೀಯ ನಾಯಕರ ಆಪ್ತ ಸಹಾಯಕನೊಂದಿಗೆ ಮಾತನಾಡಿದಂತೆ ನಟಿಸಿ ಮತ್ತೆ ಚಿನ್ನವನ್ನು ಪಡೆದಿದ್ದಾರೆ. ಇದೇ ರೀತಿ ಹಂತ ಹಂತವಾಗಿ ಒಟ್ಟು ಮೂರು ಕೆಜಿಗೂ ಅಧಿಕ ಚಿನ್ನ ಪಡೆದಿದ್ದಾರೆ. ಕೊನೆಗೆ ವಿಶಾಲ್ ಜೈನ್ ಹಣ ಕೇಳಿದಾಗ, ನಮ್ಮ ಬಳಿ 8 ಕೆಜಿ ತೂಕದ ಚಿನ್ನದ ಗಟ್ಟಿ ಇದೆ. ಅದನ್ನು ತೆಗೆದುಕೊಂಡು ಉಳಿದ ಹಣ ವಾಪಸ್ ಕೊಡಿ ಎಂದಿದ್ದಾರೆ.
ಇದನ್ನೂ ಓದಿ:ಹನಿಟ್ರ್ಯಾಪ್ ಬಲೆಗೆ ಬಿದ್ದು ಪಾಕ್ಗೆ ಮಾಹಿತಿ ಸೋರಿಕೆ ಶಂಕೆ : ಡಿಆರ್ಡಿಒ ನಿರ್ದೇಶಕನ ಬಂಧಿಸಿದ ಎಟಿಎಸ್