ಕರ್ನಾಟಕ

karnataka

ETV Bharat / state

ಡ್ರಗ್ಸ್​ ಪ್ರಕರಣ: ಬಿನೇಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು - sandalwood drug case'

ಎನ್​​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ‌ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಹಮ್ಮದ್, ಅನೂಪ್​ ಹೆಸರಿನಲ್ಲಿ ಬೇನಾಮಿ ಆಸ್ತಿ ಹೂಡಿಕೆ ಮಾಡಿದ ಆರೋಪವಿದೆ‌. ಬಿನೇಶ್ ನೀಡಿದ ಹಣದಿಂದಲೇ ಅನೂಪ್ ಡ್ರಗ್ಸ್ ವ್ಯವಹಾರಗಳಲ್ಲಿ ಬಂಡವಾಳ ಹೂಡಿದ್ದ. ಅಲ್ಲದೆ ಅನೂಪ್ ಅಕೌಂಟ್​​​​ಗಳನ್ನು ಕೊಡಿಯೇರಿ ಬಳಕೆ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ದೃಢವಾಗಿದೆ.

Bineesh Kodiyeri
ಬಿನೇಶ್ ಕೊಡೆಯೇರಿ

By

Published : Oct 30, 2020, 9:41 PM IST

ಬೆಂಗಳೂರು: ಸ್ಯಾಂಡಲ್​​​ವುಡ್​​​​ನ ನಟ-ನಟಿಯರಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಆರೋಪಿಗಳೊಂದಿಗೆ ನಂಟು ಹೊಂದಿದ್ದ ಕೇರಳ ಮಾಜಿ ಗೃಹಮಂತ್ರಿಯ ಪುತ್ರ ಬಿನೇಶ್ ಕೊಡಿಯೇರಿ ವಿರುದ್ಧ ಜಾರಿ ನಿರ್ದೇಶಾಲಯ (ಇಡಿ) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್​ಎ) ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎನ್​​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ‌ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಮೊಹಮ್ಮದ್ ಅನೂಪ್​ ಹೆಸರಿನಲ್ಲಿ ಬೇನಾಮಿ ಆಸ್ತಿ ಹೂಡಿಕೆ ಮಾಡಿದ ಆರೋಪವಿದೆ‌. ಬೆಂಗಳೂರು ಮತ್ತು ಕೇರಳದ ವಿವಿಧ ಕಡೆಗಳಲ್ಲಿ ಅನೂಪ್ ಹೆಸರಿನಲ್ಲಿ ಬಿನೇಶ್ ಪ್ರಾಪರ್ಟಿ ರಿಜಿಸ್ಟರ್ ಮಾಡಿದ್ದ. ತಂದೆಯ ರಾಜಕೀಯ ಬಳಸಿಕೊಂಡು ಬಿನೇಶ್ ಅಕ್ರಮ ಹಣ ಸಂಪಾದನೆ ಮಾಡಿ ಸಹಚರರ ಹೆಸರಿನಲ್ಲಿ ಬೇನಾಮಿ ಹೂಡಿಕೆ ಮಾಡಿರುವುದನ್ನು ಇಡಿ ಅಧಿಕಾರಿಗಳ ತನಿಖೆ ವೇಳೆ ಕಂಡುಕೊಂಡಿದ್ದಾರೆ.

ಬಿನೇಶ್ ನೀಡಿದ ಹಣದಿಂದಲೇ ಅನೂಪ್ ಡ್ರಗ್ಸ್ ವ್ಯವಹಾರಗಳಲ್ಲಿ ಬಂಡವಾಳ ಹೂಡಿದ್ದ. ಅಲ್ಲದೆ ಅನೂಪ್ ಅಕೌಂಟ್​​​​ಗಳನ್ನು ಕೊಡಿಯೇರಿ ಬಳಕೆ ಮಾಡುತ್ತಿದ್ದ. ಈ ಮೂಲಕ ಇಬ್ಬರು ಸೇರಿ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ. ಈ ಆಧಾರದ ಮೇಲೆ ಸದ್ಯ ಬಿನೇಶ್ ಕೊಡಿಯೇರಿಯನ್ನು ಇಡಿ ಬಂಧಿಸಿ ಪಿಎಂಎಲ್ಎ ಪ್ರಕರಣ ದಾಖಲಿಸಿದೆ. ಸದ್ಯ 4 ದಿನಗಳ‌ ಕಾಲ ಬಿನೇಶ್ ಇಡಿ ವಶದಲ್ಲಿದ್ದಾನೆ‌.

ABOUT THE AUTHOR

...view details