ಆನೇಕಲ್ :ಕಳೆದ ತಿಂಗಳಷ್ಟೇ ಕಾರೋಂದು ನೈಸ್ ರಸ್ತೆಯಲ್ಲಿ ಸುಟ್ಟು ಕರಕಲಾದ ಘಟನೆ ಮಾಸುವ ಮುನ್ನವೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮತ್ತೆ ಕಾರು ಆಕಸ್ಮಿಕವಾಗಿ ಹೊತ್ತಿ ಉರಿದು ಭಸ್ಮಗೊಂಡಿದೆ.
ಚಲಿಸುತ್ತಿದ್ದಾಗಲೇ ಆಕಸ್ಮಿಕ ಬೆಂಕಿ.. ಕ್ಷಣಾರ್ಧದಲ್ಲಿ ಸುಟ್ಟುಕರಕಲಾದ ಕಾರು - Kannada news
ಬೆಂಕಿ ಕೆನ್ನಾಲಿಗೆ ಕಣ್ಣಿಗೆ ಬೀಳುತ್ತಿದ್ದಂತೆ ಕಾರಿನಲ್ಲಿನಲ್ಲಿದ್ದ ಪ್ರಯಾಣಿಕರು ಇಳಿದು ದೂರಕ್ಕೆ ಓಡಿದರು. ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನ ಕ್ಷಣಾರ್ದದಲ್ಲಿ ಆವರಿಸಿತು.
ಬೆಂಕಿ ಕೆನ್ನಾಲಿಗೆ ಕಣ್ಣಿಗೆ ಬೀಳುತ್ತಿದ್ದಂತೆ ಕಾರಿನಲ್ಲಿನ ಪ್ರಯಾಣಿಕರು ಇಳಿದು ದೂರಕ್ಕೆ ಓಡಿದರು. ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಾರನ್ನು ಕ್ಷಣಾರ್ದದಲ್ಲಿ ಆವರಿಸಿತು. ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿಯೇ ಈ ಘಟನೆ ನಡೆದಿದ್ದರಿಂದ ಸುತ್ತಲು ನೆರೆದ ಜನ ಕಾರು ಉರಿಯುವುದನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರೂ ಕಾರು ಸಂಪೂರ್ಣ ಸುಟ್ಟಿತ್ತು. ಕಾರು ಉರಿಯುತ್ತಿರುವುದನ್ನು ನೋಡಲು ಜನ ಸೇರಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.