ಆನೇಕಲ್: ಕಾರ್ಖಾನೆಗಳು ಕೆರೆಯಂಗಳದಲ್ಲಿ ಸುರಿದಿದ್ದ ಕೆಮಿಕಲ್ ಮಿಶ್ರಿತ ಗೋದಿ ಹೊಟ್ಟಿನ ಬೆಂಕಿಯ ತಾಗಿ ಇಬ್ಬರು ಹುಡುಗರ ಕಾಲಿಗೆ ಗಂಭೀರ ಗಾಯವಾದ ಘಟನೆ ಅನೇಕಲ್ನಲ್ಲಿ ನಡೆದಿದೆ.
ಆನೇಕಲ್ನ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ಜೆ.ರಾಮಯ್ಯ ಫ್ಲೋರಿಂಗ್ ಮಿಲ್ ಕಾರ್ಖಾನೆಯ ಗೋದಿ ಹೊಟ್ಟನ್ನು ಕೆರೆಯಲ್ಲಿ ವಿಸರ್ಜನೆ ಮಾಡಿದೆ. ಇದು ಕೆಮಿಕಲ್ ಮಿಶ್ರಿತವಾಗಿರುವುದರಿಂದ ಬೆಂಕಿಯಾಗಿ ಆ ಜಾಗದಲ್ಲಿ ಸದಾ ಉರಿಯುತ್ತಿರುತ್ತದೆ ಆದರೆ ನೋಡುವುದಕ್ಕೆ ಬೂದಿಯಂತೆ ಕಾಣುವುದರಿಂದ ದಾವಣಗೆರೆ ಮೂಲದ ಚಂದ್ರಶೇಖರ್ ಎಂಬಾತ ಅದರ ಮೇಲೆ ಕಾಲಿಟ್ಟು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತನ್ನ ತಾಯಿಯೊಂದಿಗೆ ಕಟ್ಟಿಗೆ ಹಾಯಲು ಹೋಗಿದ್ದ ಚಂದ್ರಶೇಖರ್, ಕೆರೆಗೆ ಎಂದಿನಂತೆ ಸುರಿಯುತ್ತಿದ್ದ ಹೊಟ್ಟಿನಲ್ಲಿ ಬೆಂಕಿಯಿರುವುದು ಅರಿವಿಗೆ ಬಾರದೆ, ಬೂದಿಯ ಮೇಲೆ ಕಾಲಿಟ್ಟ ಪರಿಣಾಮ ಆಳದಲ್ಲಿದ್ದ ಕಾದ ಬೆಂಕಿ ಎರಡು ಕಾಲಗಳನ್ನು ಸುಟ್ಟಿದೆ. ಬೆಂಕಿ ಕಾಲಿಗೆ ಆವರಿಸಿದಾಗ ಮೇಲೇಳಲೂ ಆಸರೆ ಸಿಗದೆ ಜೋರಾಗಿ ಕಿರುಚಿದ್ದಾನೆ. ಮಗ ಮತ್ತು ತಾಯಿಯ ಕಿರುಚಾಟ ಕೇಳಿ ಸುತ್ತಲಿದ್ದ ಸ್ಥಳೀಯರು ಬಂದು ಹುಡುಗನನ್ನು ಮೇಲಕ್ಕೆತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.