ಬೆಂಗಳೂರು: ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಕನಸಿನ ರಾಣಿಯ ಮೇಲಿನ ಸಿಟ್ಟಿಗೆ ಇಲ್ಲೊಬ್ಬ ಯುವಕ ಮಾಡಿದ ಕೆಲಸಕ್ಕೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಪ್ರಿಯತಮೆ ಪ್ರೀತಿ ಒಪ್ಪಲಿಲ್ಲ ಅಂತ ವಾಹನಗಳ ಪುಡಿಗಟ್ಟಿ ಭಗ್ನಪ್ರೇಮಿಯ ಪುಂಡಾಟಿಕೆ - A boy attack on car in Bangalore news
ಯುವತಿ ತನ್ನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದ ಕಾರಣ ಕುಪಿತಗೊಂಡ ಭಗ್ನಪ್ರೇಮಿಯೊಬ್ಬ ಕಾರುಗಳ ಮೇಲೆ ದಾಳಿ ನಡೆಸಿ, ಪುಂಡಾಟಿಕೆ ಮೆರೆದಿದ್ದಾನೆ.

ಪಾನಮತ್ತಿನಲ್ಲಿದ್ದ ಭಗ್ನ ಪ್ರೇಮಿ ಕೃತ್ಯ ಕಂಡು ದಂಗಾದ ಜನ!
ತಡರಾತ್ರಿ ಸುಮಾರು 1.30ರ ವೇಳೆಗೆ ಮಹಾಲಕ್ಷ್ಮಿಲೇಔಟ್ ನಿವಾಸಿ ಸತೀಶ್ ಎಂಬಾತ ಪಾನಮತ್ತನಾಗಿ ಬಂದು ಹೊರಗೆ ನಿಲ್ಲಿಸಿದ್ದ ಕಾರುಗಳನ್ನು ಪುಡಿಗಟ್ಟಿದ್ದಾನೆ.
ಬಸವೇಶ್ವರ ನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಎರಡು ಕಡೆ ಸತೀಶ್ ಪುಂಡಾಟಿಕೆ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿ ಐದು ಕಾರುಗಳು ಹಾಗೂ ಮಹಾಲಕ್ಷ್ಮಿ ಲೇಔಟ್ನಲ್ಲಿ ಎರಡು ಕಾರುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ. ಬಸವೇಶ್ವರ ನಗರ ಪೊಲೀಸರು ಆರೋಪಿ ಸತೀಶ್ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.