ದೇವನಹಳ್ಳಿ(ಬೆಂಗಳೂರು): ಮುಂದೆ ಬರುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ನಂತರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಹಿಂಡಿಗನಾಳ ಬಳಿ ನಡೆದಿದೆ.
ಚಿಂತಾಮಣಿ ಮೂಲದ ಕಿರಣ್ (20) ಮೃತಪಟ್ಟ ದುರ್ದೈವಿ. ಅಂದ ಹಾಗೆ ಹೊಸಕೋಟೆ ಕಡೆಯಿಂದ ಚಿಂತಾಮಣಿ ಕಡೆಗೆ ಬೈಕ್ ಸವಾರ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುಂದೆ ಎರಡು ಬೈಕ್ಗಳಿಗೆ ಅತಿ ವೇಗದಿಂದ ಡಿಕ್ಕಿ ಹೊಡೆದ ಬೈಕ್, ನಂತರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಭೀಕರ ಅಪಘಾತ ಸಂಭವಿಸಿದೆ.