ಆನೇಕಲ್: ತಡರಾತ್ರಿ ಕಲ್ಲುಬಾಳು ಸಮೀಪದ ಪ್ರಶಾಂತಿ ಕುಟೀರ ಆಶ್ರಮದ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು ಚಿರತೆ ಓಡಾಡುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ಕಳೆದ ಹಲವು ದಿನಗಳಿಂದ ಕರಡಿ ಪದೇ ಪದೇ ಹಳ್ಳಿಗಳ ಸಮೀಪವೇ ಓಡಾಟ ನಡೆಸಿ ಆತಂಕ ಮೂಡಿಸಿತ್ತು. ಇದೀಗ ಹಳ್ಳಿಗಳ ಸಮೀಪವೇ ಕಾಣಿಸಿಕೊಂಡಿದೆ. ಹೀಗಾಗಿ ರಾತ್ರಿವೇಳೆ ಮನೆಯಿಂದ ಹೊರಬರಲು ಜನರು ಭಯ ಪಡುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.