ಕರ್ನಾಟಕ

karnataka

ETV Bharat / state

ಮಹಿಳೆ ಕೊಂದು ಮೈಮೇಲಿದ್ದ ಚಿನ್ನ‌ ಕದ್ದು ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಆರೋಪಿ ಬಂಧಿಸಿದ ಪೊಲೀಸರು! - ಬಿಹಾರದಲ್ಲಿ ಕೊಲೆ ಆರೋಪಿ ಬಂಧನ

ಮಹಿಳೆ ಕೊಂದು ಮೈಮೇಲಿದ್ದ ಚಿನ್ನ‌ ಕದ್ದು ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

yelahanka murder case, yelahanka murder case update, murder accused arrested in bihar, Bangalore crime news, ಯಲಹಂಕ ಕೊಲೆ ಪ್ರಕರಣ, ಯಲಹಂಕ ಕೊಲೆ ಪ್ರಕರಣದ ಅಪ್​ಡೇಟ್​, ಬಿಹಾರದಲ್ಲಿ ಕೊಲೆ ಆರೋಪಿ ಬಂಧನ, ಬೆಂಗಳೂರು ಅಪರಾಧ ಸುದ್ದಿ,
ಆರೋಪಿ ಪೊಲೀಸ್ ವಶಕ್ಕೆ

By

Published : Jan 24, 2022, 9:18 AM IST

ಬೆಂಗಳೂರು:ನಾಟಿ ಔಷಧ ಹಾಕಿಸಿಕೊಳ್ಳಲು ಪರಿಚಯಸ್ಥನ ಮನೆಗೆ ಮಹಿಳೆ ಹೋಗಿದ್ದಾರೆ. ಈ ವೇಳೆ, ಆರೋಪಿ ಆಕೆಯ ಮೈಮೇಲಿದ್ದ ಒಡವೆಗಳನ್ನು ಕದ್ದು ಕೊಲೆ ಮಾಡಿದ ಆರೋಪದಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಕೊಲಯಾದ ಮಹಿಳೆ

ಕಟ್ಟಿಗೇನಹಳ್ಳಿ ನಿವಾಸಿಯಾಗಿರುವ 55 ವರ್ಷದ ಸಿದ್ದಮ್ಮ ಎಂಬುವರನ್ನು ಕೊಲೆ ಮಾಡಿದ ಆರೋಪದಡಿ ಸಲೀಂ ಎಂಬಾತನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.

ಓದಿ:ಸಚಿನ್‌ ಪೈಲಟ್‌ ಹೆಸರಿನಲ್ಲಿ 16 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಕಟ್ಟಿಗೇನಹಳ್ಳಿ ಬಳಿ ಕಳೆದ 20 ವರ್ಷಗಳಿಂದ ಸಲೀಂ ಎಂಬಾತ ತನ್ನ ಮನೆಯಲ್ಲೇ ನಾಟಿ ಔಷಧ ಕೊಡುತ್ತಿದ್ದ‌‌. ಔಷಧ ಸಂಬಂಧ ಜ.20ರಂದು ಸಲೀಂ ಮನೆಗೆ ತೆರಳಿದ್ದ ಸಿದ್ದಮ್ಮಳನ್ನ ಹತ್ಯೆ ಮಾಡಿ ಆಕೆಯ ಕುತ್ತಿಗೆ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಪೊಲೀಸ್ ವಶಕ್ಕೆ

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆರೋಪಿಯನ್ನು ಬಿಹಾರದ ಪಾಟ್ನಾದಲ್ಲಿ ಬಂಧಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ‌ ಪಡೆಯಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details