ಹೆಡ್ ಕಾನ್ಸ್ಟೇಬಲ್ಗೆ ಒಕ್ಕರಿಸಿದ ಕೊರೊನಾ: ಸಾರ್ವಜನಿಕರ ಠಾಣೆ ಪ್ರವೇಶಕ್ಕೆ ನಿರ್ಬಂಧ - ಪಾದರಾಯನಪುರ ವಾರ್ಡ್ ಪಕ್ಕ ಇರುವ ಠಾಣೆ
ಉಳಿದವರು ಕೂಡಾ ಕೊರೊನಾ ಟೆಸ್ಟ್ಗೆ ಒಳಗಾಗಿದ್ದು, ತಮಗೂ ಕೊರೊನಾ ಸೋಂಕಿನ ಲಕ್ಷಣಗಳು ಇದೆಯೇ ಅನ್ನೋ ಭಯದಲ್ಲಿದ್ದಾರೆ. ಹೀಗಾಗಿ ಜೆ.ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಪ್ರವೇಶವನ್ನ ತಾತ್ಕಲಿಕವಾಗಿ ನಿರ್ಬಂಧಿಸಿದ್ದು, ಒಂದು ವೇಳೆ, ತುರ್ತು ಸಂದರ್ಭ ಇದ್ದರೆ ನಮ್ಮ 100 ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಹೊಯ್ಸಳ ಮುಖಾಂತರ ಪೊಲೀಸರು ತಿಳಿಸಿದ್ದಾರೆ.
![ಹೆಡ್ ಕಾನ್ಸ್ಟೇಬಲ್ಗೆ ಒಕ್ಕರಿಸಿದ ಕೊರೊನಾ: ಸಾರ್ವಜನಿಕರ ಠಾಣೆ ಪ್ರವೇಶಕ್ಕೆ ನಿರ್ಬಂಧ A 43-year-old head constable has a corona infection](https://etvbharatimages.akamaized.net/etvbharat/prod-images/768-512-7455362-886-7455362-1591166323451.jpg)
ಬೆಂಗಳೂರು: ಜೆ.ಜೆ ನಗರ ಠಾಣೆಯ 43 ವರ್ಷದ ಹೆಡ್ ಕಾನ್ಸ್‌ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ಪತ್ತೆಯಾದ ಕಾರಣ ಸದ್ಯ ಠಾಣೆಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಪಾದರಾಯನಪುರ ವಾರ್ಡ್ ಪಕ್ಕ ಇರುವ ಠಾಣೆ ಇದಗಿದ್ದು, ದಿನಕ್ಕೆ ಎರಡು ಮೂರು ದೂರುಗಳು ಇಲ್ಲಿ ದಾಖಲಾಗುತ್ತಿದ್ದವು.
ಅಲ್ಲದೇ ಪಾದರಾಯನಪುರದ ಬಳಿ ಕೊರೊನಾ ವಾರಿಯರ್ ಮೇಲೆ ಹಲ್ಲೆ ನಡೆದಾಗ 126 ಮಂದಿಯನ್ನ ಬಂಧಿಸಿ ಎಫ್ ಐ ಆರ್ ದಾಖಲಿಸಿದ ಹೆಗ್ಗಳಿಕೆ ಈ ಠಾಣೆಗೆ ಇತ್ತು. ಸದ್ಯ ಕೊರೊನಾ ಮಹಾಮಾರಿ ಠಾಣೆಗೆ ಒಕ್ಕರಿಸಿದ ಕಾರಣ ಇಲ್ಲಿರುವ 70 - 80 ಸಿಬ್ಬಂದಿ ಪೈಕಿ ಕೊರೊನಾ ಸೋಂಕು ಬಂದಿರುವ 43 ವರ್ಷದ ಹೆಡ್ ಕಾನ್ಸ್‌ಟೇಬಲ್ ಸಂಪರ್ಕದಲ್ಲಿದ್ದ ಕಾರಣ ಇದೀಗ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.