ಬೆಂಗಳೂರು: ಕಳೆದ ಏಪ್ರಿಲ್ನಲ್ಲಿ ರಾಜಧಾನಿಯ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಪ್ರಕರಣಕ್ಕೆ ತಿರುವು ದೊರೆತಿದೆ. ಹುಸಿ ಬಾಂಬ್ ಇ-ಮೇಲ್ ಕಳಿಸುವುದಕ್ಕೆ ಮೂಲ 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ.
ತಮಿಳುನಾಡು ಮೂಲದ 17 ವರ್ಷದ ಬಾಲಕನೇ ಇ-ಮೇಲ್‌ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಹೇಳಲಾಗ್ತಿದೆ. ಹುಸಿ ಬಾಂಬ್ ಕರೆಯ ಕೆಲದಿನಗಳ ಹಿಂದೆ ಭೂಪಾಲ್ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹುಸಿ ಸಂದೇಶ ಕಳುಹಿಸಿದ್ದರು.
ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಬೆಂಗಳೂರಿನ ಕೆಲ ಶಾಲೆಗಳಿಗೂ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಮಾಹಿತಿ ಹಂಚಿಕೊಂಡ ಎರಡು ರಾಜ್ಯಗಳ ಪೊಲೀಸರು ಬೆದರಿಕೆ ಬಂದಿದ್ದ ಎರಡು ಇಮೇಲ್‌ಗಳ ಐಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ.