ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ದೈಹಿಕ ಸಾಮರ್ಥ್ಯ ಮಾತ್ರವಲ್ಲದೆ, ಮಾನಸಿಕ ಸ್ಥೈರ್ಯ ಕೂಡ ಅಗತ್ಯ. ಹೀಗೆ ಕೊರೊನಾ ಸೋಂಕು ತಗುಲಿದ್ದರೂ ಸಹ, ವೈರಸ್ ವಿರುದ್ಧ ಹೋರಾಡಿದ 99 ವರ್ಷದ ವೃದ್ಧೆ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಲೇ ಅಜ್ಜಿ... ಕೋವಿಡ್ ವಿರುದ್ಧ ಹೋರಾಡಿ ಗೆದ್ದ 99 ವರ್ಷದ ಬೆಂಗಳೂರು ವೃದ್ಧೆ! - ಬೆಂಗಳೂರು ವೃಧ್ಧೆ ಪಾರ್ವತಿ
ಕೊರೊನಾ ಭಯದಿಂದಲೇ ಕೆಲವರು ಪ್ರಾಣಕ್ಕೆ ಕುತ್ತು ತಂದುಕೊಂಡವರಿದ್ದಾರೆ. ಆದ್ರೆ ಅಂಜದೆ, ಅಳುಕದೇ ಬೆಂಗಳೂರಿನ 99 ವರ್ಷದ ವೃದ್ಧೆವೋರ್ವರು ಕೋವಿಡ್ ವಿರುದ್ಧ ಹೋರಾಟ ನಡೆಸಿ ಸಂಪೂರ್ಣ ಗುಣಮುಖರಾಗಿದ್ದಾರೆ.
ಕೋವಿಡ್ ವಿರುದ್ಧ ಹೋರಾಡಿದ 99 ವರ್ಷದ ವೃದ್ದೆ
ಕೊರೊನಾ ವಿರುದ್ಧ ಗೆದ್ದು ಬಂದಿರುವ 99 ವರ್ಷದ ವೃದ್ಧೆಯ ಹೆಸರು ಪಾರ್ವತಿಬಾಯಿ. ಕೆಮ್ಮು ಜ್ವರದಿಂದ ಬಳಲುತ್ತಿದ್ದ ಇವರು ಮಲ್ಲೇಶ್ವರಂನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಆಗಸ್ಟ್ 1ರಂದು ದಾಖಲಾಗಿದ್ದರು. ಇದೀಗ ಆ.11ರಂದು ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಬಂದ ತಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಹೆದರಿ ಮಾನಸಿಕ ಖಿನ್ನತೆಗೆ ಒಳಗಾಗುವ ಬದಲು ಧೈರ್ಯದಿಂದ ಚಿಕಿತ್ಸೆ ಪಡೆದುಕೊಳ್ಳಬೇಕಿದೆ. ಹಿರಿಯರಿಗೆ ಕೊರೊನಾ ತೀವ್ರತೆ ಹೆಚ್ಚಾಗಿದ್ದರೂ, ಮಾನಸಿಕ ಸ್ಥೈರ್ಯದಿಂದ ಜಯ ಗಳಿಸಬಹುದು ಅನ್ನೋದಕ್ಕೆ ಇವರೇ ಸಾಕ್ಷಿಯಾಗಿದ್ದಾರೆ.