ಕರ್ನಾಟಕ

karnataka

ETV Bharat / state

ಕೊರೊನಾ‌ ಗೆದ್ದ 980 ಗ್ರಾಂ ತೂಕದ ಅವಧಿ ಪೂರ್ವ ನವಜಾತ ಶಿಶು! - corona latest news

980 ಗ್ರಾಂ ತೂಕದ ಅವಧಿ ಪೂರ್ವ ನವಜಾತ ಶಿಶುವೊಂದು ಕೊರೊನಾದಿಂದ ಪಾರಾಗಿದೆ. ಮಗು ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಡಿಸ್ಚಾರ್ಜ್ ಮಾಡಲಾಗಿದೆ.

980 grams premature newborn won corona
ವಾಣಿ ವಿಲಾಸ ಆಸ್ಪತ್ರೆ

By

Published : Sep 16, 2020, 10:41 PM IST

ಬೆಂಗಳೂರು:ಕೊರೊನಾ ಸೋಂಕು ಯಾವ ವಯೋಮಾನದವರನ್ನೂ ಬಿಟ್ಟಿಲ್ಲ. ಕೊರೊನಾ ವಿರುದ್ಧ ಹೋರಾಟ ಇಂದಿಗೂ ಮುಂದುವರೆದಿದೆ.‌ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೊರೊನಾ ಹೋರಾಟ ನಡೆಸಿದ್ದಾರೆ. ಇದೀಗ ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದ್ದ 980 ಗ್ರಾಂ ತೂಕದ ಅವಧಿ ಪೂರ್ವ ನವಜಾತ ಶಿಶುವೊಂದು ಕೊರೊನಾ ಗೆದ್ದಿದೆ.

ಗರ್ಭಿಣಿಯನ್ನು ಕಳೆದ ಆ. 13ರಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಹೆಣ್ಣುಮಗು ಐದು ದಿನಗಳ ಕಾಲ, ಮಕ್ಕಳ ಪ್ರತ್ಯೇಕ ವಾರ್ಡ್​ನಲ್ಲಿತ್ತು. ನಂತರ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಯ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಮಗುವಿಗೆ ತೀವ್ರವಾದ ಆರೋಗ್ಯ ಸಮಸ್ಯೆಗಳಿದ್ದುದರಿಂದ, ಆರೋಗ್ಯ ಚೇತರಿಕೆ ಸವಾಲಿನದ್ದಾಗಿತ್ತು. ಆದರೆ, ಈ ವೇಳೆ ಮಗುವಿನ ಕೋವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಬಂದ ವರದಿಯಲ್ಲಿ ಮಗುವಿಗೆ ಲಕ್ಷಣ ರಹಿತ ಕೊರೊನಾ ಸೋಂಕು ದೃಢಪಟ್ಟಿತ್ತು.

ಹಾಗಾಗಿ ಮಗುವಿಗೆ ಕೊರೊನಾ ಚಿಕಿತ್ಸೆ ನೀಡಲಾಯಿತು. ಮಗುವು ಟಿಸಿಸಿನಲ್ಲಿದ್ದಾಗ ಎಕ್ಸ್ಪ್ರೆಸ್ ಬ್ರೆಸ್ಟ್ ಫೀಡಿಂಗ್ ಮುಖಾಂತರ ಮಗುವಿಗೆ ಹಾಲುಣಿಸಲಾಗುತ್ತಿತ್ತು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದೀಗ ಮಗುವಿನ ಸೋಂಕು ನಿವಾರಣೆಯಾಗಿದ್ದು, ಕಡಿಮೆ ತೂಕದ ಜನನ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಲ್ಲೇಶ್ ತಿಳಿಸಿದ್ದಾರೆ.

ಮಗು ಆರಂಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಹಾಗಾಗಿ, ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಡಿಸ್ಚಾರ್ಜ್ ವೇಳೆ ಮಗು 1.2 ಕೆಜಿ ತೂಕವಿತ್ತು ಎಂದು ತಿಳಿದು ಬಂದಿದೆ.

ABOUT THE AUTHOR

...view details