ಬೆಂಗಳೂರು:ರಾಜ್ಯದಲ್ಲಿಂದು ಒಂದೇ ದಿನ 9725 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,626ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿಂದು 9725 ಜನರಲ್ಲಿ ಸೋಂಕು ಪತ್ತೆ: 6583 ಜನ ಸೋಂಕಿನಿಂದ ಗುಣಮುಖ - corona news
ರಾಜ್ಯದಲ್ಲಿ ಇಂದು 9725 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,01,626ಕ್ಕೆ ಏರಿಕೆಯಾಗಿದೆ. ಕೋವಿಡ್ನಿಂದ ಇಂದು 70 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು
ಒಟ್ಟು ಸೋಂಕಿತರ ಸಂಖ್ಯೆ 4,84,990 ಆಗಿದೆ. ಕೋವಿಡ್ಗೆ ಇಂದು 70 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 7536ಕ್ಕೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಇಂದು 6583 ಜನ ಗುಣಮುಖರಾಗಿದ್ದು, 3,75,809 ಜನರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ.
818 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿ 4,95,094 ಮಂದಿ ಇದ್ದಾರೆ. ಈವರೆಗೆ 39,86,283 ಮಂದಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.