ಬೆಂಗಳೂರು: ಮಸೀದಿ ಮತ್ತು ಮಂದಿರದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಈವರೆಗೆ ಸುಮಾರು 959 ಅರ್ಜಿಗಳು ಪೊಲೀಸರಿಗೆ ಬಂದಿವೆ. ಈ ಪೈಕಿ 121 ಅರ್ಜಿದಾರರಿಗೆ ಕಾನೂನಿನ ಅಡಿಯಲ್ಲಿ ಅನುಮತಿ ನೀಡಲಾಗಿದೆ. ಉಳಿದಂತೆ ಅರ್ಜಿಗಳನ್ನು ಪರಿಶೀಲಿಸಿ ಬಳಿಕ ವಿಲೇವಾರಿ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದು ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಂದಿರ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಬಂದ್ವು 959 ಅರ್ಜಿಗಳು - police commissioner prathap reddy
ಮಸೀದಿ ಮತ್ತು ಮಂದಿರದಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ 959 ಅರ್ಜಿಗಳು ಪೊಲೀಸರಿಗೆ ಬಂದಿದ್ದು, 121 ಅರ್ಜಿದಾರರಿಗೆ ಅನುಮತಿ ನೀಡಲಾಗಿದೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಇನ್ನೂ ಇದೇ ವೇಳೆ ಈದ್ಗಾ ಮೈದಾನದಲ್ಲಿ ಸಭೆ ಸಮಾರಂಭಕ್ಕೆ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಸದ್ಯ ಈವರೆಗೂ ಯಾರೂ ಅನುಮತಿ ಕೋರಿ ಅರ್ಜಿ ಕೊಟ್ಟಿಲ್ಲ, ಅರ್ಜಿ ಕೊಟ್ಟರೆ ಕಾನೂನು ರೀತಿಯಲ್ಲಿ ಏನೆಲ್ಲ ಮಾಡಬೇಕೋ ಅದನ್ನು ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ:ದಕ್ಷಿಣ ಭಾರತದಲ್ಲೇ ಅಪರೂಪವಾದ ದೊಡ್ಡ ಸ್ಫಟಿಕ ಶಿವಲಿಂಗ ಕದ್ದೊಯ್ದ ಖದೀಮರು