ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 9543 ಜನರಿಗೆ ಸೋಂಕು ದೃಢ: 79 ಮಂದಿ ಕೋವಿಡ್ ಗೆ ಬಲಿ.. - corona infection in the state

ರಾಜ್ಯದಲ್ಲಿ ಇಂದು ಕೊರೊನಾ ಪರೀಕ್ಷೆಗೆ ಒಳಗಾದ 67,857 ಜನರಲ್ಲಿ 9543 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,75,566ಕ್ಕೆ ಏರಿಕೆ ಆಗಿದೆ.

9543 people infected in the state: 79 killed due to Kovid 19
ರಾಜ್ಯದಲ್ಲಿಂದು 9543 ಜನರಿಗೆ ಸೋಂಕು ದೃಢ: 79 ಮಂದಿ ಕೋವಿಡ್ ಗೆ ಬಲಿ..

By

Published : Sep 27, 2020, 8:37 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಇಂದು ಕೊರೊನಾ ಪರೀಕ್ಷೆಗೆ ಒಳಗಾದ 67,857 ಜನರಲ್ಲಿ 9543 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,75,566ಕ್ಕೆ ಏರಿಕೆ ಆಗಿದೆ.

ಇನ್ನೂ ಇಂದು 6522 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 4,62,241 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆದಂತಾಗಿದೆ. ಸಧ್ಯ 1,04,724 ಸಕ್ರಿಯ ಪ್ರಕರಣಗಳಿದ್ದು, 835 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ 79 ಮೃತಪಟ್ಟಿದ್ದು, ಸಾವಿನ ಸಂಖ್ಯೆ 8582 ಕ್ಕೆ ಏರಿಕೆಯಾಗಿದೆ. ಇನ್ನೂ 19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ.

ಸೋಂಕಿತರ ನೇರ ಸಂಪರ್ಕದಲ್ಲಿ 5,11,113 ಮಂದಿ ಹಾಗೂ ದ್ವಿತೀಯ ಹಂತದಲ್ಲಿ 4,67,667 ಮಂದಿ ಸಂಪರ್ಕದಲ್ಲಿದ್ದಾರೆ. 1,62,847 ಮಂದಿ ಕಳೆದ 14 ದಿನಗಳಲ್ಲಿ ಕ್ವಾರೆಂಟೈನ್ ನಲ್ಲಿ ಇದ್ದಾರೆ.

ಬೆಂಗಳೂರಿನಲ್ಲಿ ಇಂದು 4217 ಮಂದಿಗೆ ಸೋಂಕು ದೃಢ: 15 ಮಂದಿ ಬಲಿ

ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 4217 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 220847 ಕ್ಕೆ ಏರಿಕೆ ಆಗಿದೆ. ಇಂದು 3306 ಗುಣಮುಖರಾಗಿದ್ದು, ಈವರೆಗೆ 1,73,736 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಈ ಮೂಲಕ 44,274 ಸಕ್ರಿಯ ಪ್ರಕರಣಗಳು ಇದ್ದು, 15 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2836ಕ್ಕೆ ಏರಿಕೆ ಆಗಿದೆ.

ABOUT THE AUTHOR

...view details