ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ನಗರದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ 864 ದ್ವಿಚಕ್ರ ವಾಹನ, 26 ಆಟೋ, 54 ಕಾರು ಸೇರಿದಂತೆ ಒಟ್ಟು 944 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು- 414, ದಕ್ಷಿಣ ವಿಭಾಗದಲ್ಲಿ - 171, ಉತ್ತರ ವಿಭಾಗದಲ್ಲಿ- 147 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 2021 ಡಿಸೆಂಬರ್ 28ರಿಂದ ಜನವರಿ 9 ರ ವರೆಗೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳ ವಿರುದ್ಧ 1,484 ಕೇಸ್ ದಾಖಲಿಸಲಾಗಿದೆ.