ಕರ್ನಾಟಕ

karnataka

ETV Bharat / state

COVID: ರಾಜ್ಯದಲ್ಲಿಂದು 942 ಮಂದಿಗೆ ಸೋಂಕು - ಕರ್ನಾಟಕದ ಕೊರೊನಾ ಸುದ್ದಿ

ರಾಜ್ಯದಲ್ಲಿ ಇಂದು 942 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 737 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಯಾರು ಕೂಡ ಸೋಂಕಿಗೆ ಬಲಿಯಾಗಿಲ್ಲ.

ಕೋವಿಡ್
ಕೋವಿಡ್

By

Published : Jul 10, 2022, 10:17 PM IST

ಬೆಂಗಳೂರು:ರಾಜ್ಯದಲ್ಲಿಂದು 942 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. 22,403 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 942 ಮಂದಿಗೆ ಸೋಂಕು ದೃಢಪಟ್ಟಿದೆ. 737 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 6,898 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪ್ರಮಾಣ ಶೇ.4.20, ವಾರದ ಸೋಂಕಿತರ ಪ್ರಮಾಣ ಶೇ.3.96ರಷ್ಟಿದೆ.

ಈ ವಾರದ ಸಾವಿನ ಪ್ರಮಾಣ ಶೇ.0.06 ರಷ್ಟಿದೆ. ಬೆಂಗಳೂರಲ್ಲಿಂದು 831 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,12,896ಕ್ಕೆ ಏರಿಕೆ ಆಗಿದೆ. ಇಂದು 681 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗಿನ ಒಟ್ಟು ಸಾವಿನ ಸಂಖ್ಯೆ 16,970. ರಾಜಧಾನಿಯಲ್ಲಿ 6,389 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು.. ಎನ್​ಡಿಎ ಅಭ್ಯರ್ಥಿಗೆ ಜೆಡಿಎಸ್​ ಬೆಂಬಲ

ABOUT THE AUTHOR

...view details