ಕರ್ನಾಟಕ

karnataka

ETV Bharat / state

22 ಕ್ಯಾರಟ್​ ಚಿನ್ನಕ್ಕೆ ನಕಲಿ ಹಾಲ್​ಮಾರ್ಕ್​ ಸೀಲ್​... ಪ್ರತಿಷ್ಠಿತ ಜ್ಯುವೆಲ್ಲರಿ  ಕಂಪನಿಗಳ ಬೆನ್ನತ್ತಿದ ಸಿಸಿಬಿ - ಆರೋಪಿ ಸುದರ್ಶನ್ ಜೈನ್ ತನಿಖೆ

22 ಕ್ಯಾರಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ನಕಲಿ ಸೀಲ್ ಹಾಕಿ ಮಾರಾಟ ಮಾಡುತ್ತಿದ್ದ ಆರೋಪಿ ಸುದರ್ಶನ್ ಜೈನ್ ತನಿಖೆಯನ್ನ ಸಿಸಿಬಿ ಡಿಸಿಪಿ ರವಿ ಕುಮಾರ್ ಚುರುಕುಗೊಳಿಸಿದ್ದು, ಇನ್ನಷ್ಟು ಪ್ರತಿಷ್ಠಿತ ಜ್ಯುವೆಲ್ಲರಿ ಕಂಪನಿಗಳನ್ನು ಬೆನ್ನತ್ತಿದ್ದಾರೆ.

ಆರೋಪಿಯನ್ನ ಬಂಧಿಸಿರುವುದು

By

Published : Aug 12, 2019, 4:06 PM IST

ಬೆಂಗಳೂರು: 22 ಕ್ಯಾರಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ನಕಲಿ ಸೀಲ್ ಹಾಕಿ ಮಾರಾಟ ಮಾಡುತ್ತಿದ್ದ ಆರೋಪಿ ಸುದರ್ಶನ್ ಜೈನ್ ತನಿಖೆಯನ್ನ ಸಿಸಿಬಿ ಡಿಸಿಪಿ ರವಿ ಕುಮಾರ್ ಚುರುಕುಗೊಳಿಸಿದ್ದಾರೆ.

ಆರೋಪಿಯನ್ನ ಬಂಧಿಸಿರುವುದು

ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ 2016 ಆ್ಯಕ್ಟ್​ ಪ್ರಕಾರ 47 ಕಂಪೆನಿಗೆ ಮಾತ್ರ 22 ಕ್ಯಾರಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ಸೀಲ್ ಹಾಕುವ ಅನುಮತಿ ಕೊಡಲಾಗಿತ್ತು. ಆದರೆ ಆರೋಪಿ ಸುದರ್ಶನ್ ಹಲವಾರು ಕಂಪನಿಗಳಿಗೆ ಚಿನ್ನವನ್ನ ಕೊಟ್ಟಿರುವ ಮಾಹಿತಿ ಬಹಿರಂಗವಾಗಿದ್ದು ಈ ಹಿನ್ನೆಲೆ, ಸುದರ್ಶನ್ನನ್ನು ತೀವ್ರ ವಿಚಾರಣೆ ಒಳಪಡಿಸಲಾಗಿದೆ.

ಶಿವಾಜಿ‌ನಗರ ಮತ್ತು ಆರ್ ಆರ್‌ ನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ 22 ಕ್ಯಾರೆಟ್ ಚಿನ್ನಕ್ಕೆ 916 ಹಾಲ್ ಮಾರ್ಕ್ ಮುದ್ರೆ ಹಾಕುವ ವ್ಯಾಪರವನ್ನ ಕಳೆದ ಆರು ತಿಂಗಳಿಂದ ಮಾಡುತ್ತಿದ್ದ. ಹೀಗಾಗಿ ಸೂಕ್ತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದಾರೆ.

ABOUT THE AUTHOR

...view details