ಕರ್ನಾಟಕ

karnataka

ETV Bharat / state

90 ಕಾನ್​ಸ್ಟೇಬಲ್​ಗಳಿಗೆ ಹೆಡ್​​ಕಾನ್​ಸ್ಟೇಬಲ್​ಗಳಾಗಿ ಮುಂಬಡ್ತಿ ನೀಡಿದ ಪೊಲೀಸ್​​ ಆಯುಕ್ತರು! - ಕಾನ್​ಸ್ಟೇಬಲ್

ಗಣೇಶ ಹಬ್ಬದ ದಿನದಂದು ನೂರಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು. ಈ ಬಾರಿಯೂ ಅರ್ಹ 90 ಕಾನ್​ಸ್ಟೇಬಲ್​ಗಳು ಹೆಡ್​ಕಾನ್​​ಸ್ಟೇಬಲ್​ಗಳಾಗಿ ಮುಂಬಡ್ತಿ ಪಡೆದಿದ್ದಾರೆ.

ಭಾಸ್ಕರ್​ ರಾವ್​

By

Published : Sep 12, 2019, 9:08 PM IST

ಬೆಂಗಳೂರು:ಪೊಲೀಸರಿಗೆ ಮುಂಬಡ್ತಿ ಭಾಗ್ಯ ಮುಂದುವರೆಸಿರುವ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​, ಈ ಬಾರಿ 90 ಪೇದೆಗಳಿಗೆ ಮುಖ್ಯ ಪೇದೆಗಳನ್ನಾಗಿ ಮುಂಬಡ್ತಿ​ ನೀಡಿದ್ದಾರೆ.

ಗಣೇಶ ಹಬ್ಬದ ದಿನದಂದು ನೂರಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಗೆ ಬಡ್ತಿ ನೀಡಲಾಗಿತ್ತು. ಈ ಬಾರಿಯೂ ಅರ್ಹ 90 ಕಾನ್​ಸ್ಟೇಬಲ್​ಗಳು ಹೆಡ್​ ಕಾನ್​ಸ್ಟೇಬಲ್​ಗಳಾಗಿ ಮುಂಬಡ್ತಿ ಪಡೆದಿದ್ದಾರೆ. ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದ್ದು, ನಮೂದಿಸಿರುವ ಸ್ಥಳಗಳಿಗೆ ತೆರಳಿ ರಿಪೋರ್ಟ್​ ಮಾಡಿಕೊಂಡು ಪಾಲನಾ ವರದಿಯನ್ನು ಆಯಾ ವಿಭಾಗದ ಡಿಸಿಪಿಗಳಿಗೆ ನಿಡಬೇಕೆಂದು ಆದೇಶಿಸಲಾಗಿದೆ.

ಒಂದು ವೇಳೆ ಕಾನ್​ಸ್ಟೇಬಲ್​ಗಳ ಮೇಲೆ ಅಮಾನತು, ಪ್ರಕರಣ ದಾಖಲು ಸೇರಿದಂತೆ ಮತ್ತಿತರ ವ್ಯಾಜ್ಯಗಳು ಇದ್ದರೆ ಯಾವುದೇ ಕ್ಷಣದಲ್ಲಾದರೂ ಮುಂಬಡ್ತಿ ಆದೇಶ ತಡೆ ಹಿಡಿಯಹುದೆಂದು ಆದೇಶದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details