ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತ್​​ ಚುನಾವಣೆ ಹಿನ್ನೆಲೆ 9 ಐಎಎಸ್ ಅಧಿಕಾರಿಗಳ ವರ್ಗಾವಣೆ - Officers Transfer News

ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆ 9 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೆಲವರಿಗೆ ಹೆಚ್ಚುವರಿ ಇಲಾಖೆಯ ಜವಾಬ್ದಾರಿಯನ್ನು ನೀಡಿ ಆದೇಶ ನೀಡಿದೆ.

9 ias officers transfer
ಸಂಗ್ರಹ ಚಿತ್ರ

By

Published : Dec 4, 2020, 9:37 PM IST

ಬೆಂಗಳೂರು: ಗ್ರಾಮ ಪಂಚಾಯತ್​ ಚುನಾವಣೆ ಹಿನ್ನೆಲೆಯಲ್ಲಿ 9 ಜಿಲ್ಲಾ ಪಂಚಾಯತ್​ಗಳಿಗೆ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು (ಸಿಇಒ) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅವರ ಹೆಸರುಗಳ ಮುಂದಿರುವ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ...

  • ಎಂ.ಆರ್.ರವಿಕುಮಾರ್ - ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್​.
  • ಎನ್.ಎಂ.ನಾಗರಾಜ್ - ಕೋಲಾರ ಜಿಲ್ಲಾ ಪಂಚಾಯತ್​.
  • ಪರಮೇಶ್ -ಮೈಸೂರು ಜಿಲ್ಲಾ ಪಂಚಾಯತ್​.
  • ಜಿ.ಲಕ್ಷ್ಮೀಕಾಂತ ರೆಡ್ಡಿ- ವಿಜಯಪುರ ಜಿಲ್ಲಾ ಪಂಚಾಯತ್​.
  • ಮೊಹಮ್ಮದ್ ರೋಷನ್ -ಹಾವೇರಿ ಜಿಲ್ಲಾ ಪಂಚಾಯತ್​.
  • ಶೇಕ್ ತನ್ವಿರ್ ಆಸೀಫ್-ರಾಯಚೂರು ಜಿಲ್ಲಾ ಪಂಚಾಯತ್.
  • ಡಾ. ಕೆ.ನಂದಿನಿ ದೇವಿ-ಚಿತ್ರದುರ್ಗ ಜಿಲ್ಲಾ ಪಂಚಾಯತ್​.
  • ಎಂ.ಪ್ರಿಯಾಂಕ-ಉತ್ತರ ಕನ್ನಡ ಜಿಲ್ಲಾ ಪಂಚಾಯತ್​.
  • ಡಿ.ಭಾರತಿ- ಹಾಸನ ಜಿಲ್ಲಾ ಪಂಚಾಯತ್​

ಅಲ್ಲದೆ, ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರಿಗೆ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊಣೆಗಾರಿಕೆ ನೀಡಲಾಗಿದೆ.

ಸಾರ್ವಜನಿಕ ಉದ್ದಿಮೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಹೆಚ್​.ಅನಿಲ್ ಕುಮಾರ್ ಅವರಿಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜವಾಬ್ದಾರಿ ವಹಿಸಲಾಗಿದೆ.

ಇದನ್ನೂ ಓದಿ : ಕಂದಾಯ ಇಲಾಖೆಯಲ್ಲಿ 45 ಭೂ ಮಾಪಕರ ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

ABOUT THE AUTHOR

...view details