ಕರ್ನಾಟಕ

karnataka

By

Published : Apr 17, 2020, 9:31 PM IST

ETV Bharat / state

ಬೆಂಗಳೂರಲ್ಲಿ ಒಂದೇ‌ ದಿನ 9 ಕೊರೊನಾ ಪಾಸಿಟಿವ್ ಕೇಸ್​ : ಸೋಂಕಿತರ ಸಂಖ್ಯೆ 85ಕ್ಕೆ ಏರಿಕೆ

ಬೆಂಗಳೂರು ನಗರದ ಹಾಟ್​ಸ್ಪಾಟ್​ಗಳ ಸಂಖ್ಯೆ 32 ರಿಂದ 30 ಕ್ಕೆ ಇಳಿಕೆಯಾಗಿದೆ. ಪಶ್ಚಿಮ ವಲಯದಲ್ಲಿ ಒಂದೇ ದಿನ 8 ಕೊರೊನಾ ಪಾಸಿಟಿವ್​ ಪ್ರಕರಣಗಳೂ ದಾಖಲಾಗಿವೆ.

Corona statistic
ಕೊರೊನಾ ಅಂಕಿ-ಅಂಶ

ಬೆಂಗಳೂರು: ನಗರದಲ್ಲಿ ಇಂದು ಒಂದೇ ದಿನ ಒಂಬತ್ತು ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 76 ರಿಂದ 85 ಕ್ಕೆ ಏರಿಕೆಯಾಗಿದೆ.

ಕೊರೊನಾ ಅಂಕಿ-ಅಂಶ

ಇಂದು ಅತಿಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ನಗರದ ಪಶ್ಚಿಮ ವಲಯದಲ್ಲಿ ವರದಿಯಾಗಿವೆ. ಎಂಟು ಕೊರೊನಾ ಸೋಂಕಿತರು ಪಶ್ಚಿಮ ವಿಭಾಗದವರಿದ್ದಾರೆ.

ನಗರದ ಹಾಟ್​ಸ್ಪಾಟ್​ಗಳ ಸಂಖ್ಯೆ 32 ರಿಂದ 30 ಕ್ಕೆ ಇಳಿಕೆಯಾಗಿದೆ. ಬೆಂಗಳೂರು ಪಶ್ಚಿಮ ವಲಯದ ಸುಭಾಷ್ ನಗರ ಹಾಗೂ ಯಲಹಂಕದ ಥಣಿಸಂದ್ರ ವಾರ್ಡ್​ಗಳನ್ನು ಈಗ ಹಾಟ್ ಸ್ಪಾಟ್ ಲಿಸ್ಟ್ ನಿಂದ ಕೈಬಿಟ್ಟಿದ್ದಾರೆ. ಕೊರೊನಾ ಸೋಂಕಿತರು ತಮ್ಮ ವಿಳಾಸ‌ ನೀಡುವಾಗ ಆಗುವ ವ್ಯತ್ಯಾಸದಿಂದ ಹಾಟ್ ಸ್ಪಾಟ್ ಗೆ ಹೆಸರು ಸೇರಿಸಲಾಗಿದ್ದು, ಈಗ ಸರಿಯಾದ ಮಾಹಿತಿಯ ಬಳಿಕ ಮೂವತ್ತು ವಾರ್ಡ್ ಅಂತಿಮಗೊಳಿಸಲಾಗಿದೆ.

ಕೊರೊನಾ ಅಂಕಿ-ಅಂಶ

ಈ ಹಿಂದೆ ಅತಿಹೆಚ್ಚು ಕೊರೊನಾ ಪಾಸಿಟಿವ್ ವ್ಯಕ್ತಿಗಳು ದಕ್ಷಿಣ ವಲಯದಲ್ಲಿದ್ದರು. ಆದರೆ ಇಂದು ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರು ವರದಿಯಾಗಿದ್ದಾರೆ.

  • ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 85
  • ಗುಣಮುಖರಾದವರು- 35
  • ಮೃತರ ಸಂಖ್ಯೆ -3
  • ಹಾಟ್​ಸ್ಪಾಟ್ ವಾರ್ಡ್​ಗಳ ಸಂಖ್ಯೆ - 30
  • 14 ದಿನಗಳ ಕ್ವಾರಂಟೈನ್ ನಲ್ಲಿ - 50 ಪಾಸಿಟಿವ್
  • 14 ರಿಂದ 28 ದಿನದಲ್ಲಿ ಕ್ವಾರಂಟೈನ್​ನಲ್ಲಿ- 33 ಪಾಸಿಟಿವ್
  • 28 ದಿನಗಳ ಮೇಲ್ಪಟ್ಟು - 2 ಪಾಸಿಟಿವ್ ಪ್ರಕರಣ
  • ಫೀವರ್ ಕ್ಲಿನಿಕ್ ಗಳಲ್ಲಿ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ- 4,057
  • ಲ್ಯಾಬ್ ಪರೀಕ್ಷೆಗೆ ಒಳಪಟ್ಟವರ ಸಂಖ್ಯೆ- 15

ABOUT THE AUTHOR

...view details