ಬೆಂಗಳೂರು:ಲಾಕ್ಡೌನ್ ಹೇರಿದ ನಂತರಮಾಗಡಿ ರಸ್ತೆ, ಯಶವಂತಪುರ, ಕೋರಮಂಗಲ, ಶಿವಾಜಿನಗರ ಠಾಣೆ ಸೇರಿ 9 ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ 55 ಮಂದಿಯನ್ನು ಕ್ವಾರಂಟೈನ್ ಮತ್ತು ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಲಾಕ್ಡೌನ್ ನಂತರ 9 ಪೊಲೀಸರಿಗೆ ಕೊರೊನಾ; ಆರಕ್ಷರಲ್ಲಿ ಮನೆ ಮಾಡಿದ ಆತಂಕ - ಕೊರೊನಾ ವೈರಸ್
ಲಾಕ್ಡೌನ್ ಹೇರಿದ ನಂತರ 9 ಪೊಲೀಸರಿಗೆ ಕೊರೊನಾ ಧೃಡಪಟ್ಟಿದೆ. ನಗರದಲ್ಲಿ ಒಟ್ಟು 675 ಪೊಲೀಸರಲ್ಲಿ ಕೋವಿಡ್ ಸೋಂಕು ಅಂಟಿಕೊಂಡಿದೆ.
![ಲಾಕ್ಡೌನ್ ನಂತರ 9 ಪೊಲೀಸರಿಗೆ ಕೊರೊನಾ; ಆರಕ್ಷರಲ್ಲಿ ಮನೆ ಮಾಡಿದ ಆತಂಕ corona cases found in police department](https://etvbharatimages.akamaized.net/etvbharat/prod-images/768-512-8059659-937-8059659-1594968469740.jpg)
ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು
ನಗರದಲ್ಲಿ ಈವರೆಗೂ 675 ಪೊಲೀಸರಲ್ಲಿ ಸೋಂಕು ದೃಢವಾಗಿದ್ದು, 415 ಮಂದಿ ಗುಣಮುಖರಾಗಿದ್ದಾರೆ. ಸುಮಾರು 1,100 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಇದರಿಂದಾಗಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.