ಬೆಂಗಳೂರು : ಕೋವಿಡ್ ಕಾರಣಕ್ಕೆ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳು ಪೂರ್ಣಾವಧಿಯಲ್ಲಿ ಶುರುವಾಗಿರಲಿಲ್ಲ. ಇದೀಗ ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೇ ಬೆಂಗಳೂರು ನಗರ ಹಾಗೂ ಕೇರಳ ಗಡಿಭಾಗದಲ್ಲಿ ಕೇವಲ 8ನೇ ತರಗತಿ ಮಾತ್ರ ಆರಂಭವಾಗಿದ್ದು, ಉಳಿದ ತರಗತಿಗಳಿಗೆ ವಿದ್ಯಾಗಮವೇ ಮುಂದುವರಯಲಿದೆ.
ಒಂದು ವರ್ಷದ ಬಳಿಕ ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಹಾಗೂ ಪೋಷಕರಿಂದ ಅನುಮತಿ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮೊದಲ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ದ್ವಾರದ ಬಳಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.