ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 8,865 ಕೊರೊನಾ ಕೇಸ್ ಪತ್ತೆ: 104 ಮಂದಿ ಬಲಿ - Corona Bangalore

ರಾಜ್ಯದಲ್ಲಿ ಇಂದೂ ಸಹ ಕೊರೊನಾ 8 ಸಾವಿರದ ಗಡಿದಾಟಿದೆ. ಒಟ್ಟು 8,865 ಮಂದಿಗೆ ಪಾಸಿಟವ್ ವರದಿಯಾಗಿದ್ದು, ಮೃತಪಟ್ಟವರ ಸಂಖ್ಯೆ ಶತಕದ ಗಡಿ ದಾಟಿದೆ.

8,865 New corona cases reported in State and 104 death
ರಾಜ್ಯದಲ್ಲಿಂದು 8,865 ಹೊಸ ಕೊರೊನಾ ಕೇಸ್ ದೃಢ: 104 ಮಂದಿ ಬಲಿ

By

Published : Sep 3, 2020, 7:28 PM IST

ಬೆಂಗಳೂರು:ರಾಜ್ಯದಲ್ಲಿಂದು 71,124 ಮಂದಿಗೆ ಕೊರೊನಾ‌ ಪರೀಕ್ಷೆ ನಡೆಸಿದ್ದು, ಅದರಲ್ಲಿ 8,865 ಮಂದಿಗೆ ಸೋಂಕು ದೃಢವಾಗಿದೆ. ಇತ್ತ ಮತ್ತೆ ನೂರರ ಗಡಿದಾಟಿರುವ ಮೃತರ ಸಂಖ್ಯೆ ಇಂದು 104 ಮಂದಿಯನ್ನ‌ ಬಲಿ ಪಡೆದಿದೆ.

ಈ ಮೂಲಕ ಸಾವಿನ ಸಂಖ್ಯೆ 6054ಕ್ಕೆ ಏರಿಕೆಯಾಗಿದೆ. 19 ಮಂದಿ ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. 3,70,206ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇಂದು 7,122 ಗುಣಮುಖರಾಗಿ, ಒಟ್ಟಾರೆ 2,68,035 ಜನರು ಡಿಸ್ಜಾರ್ಜ್ ಆಗಿದ್ದಾರೆ‌‌. ಇನ್ನು ರಾಜ್ಯದಲ್ಲಿ 96,098 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 735 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಬರೋಬ್ಬರಿ 4,16,870, ದ್ವಿತೀಯ ಸಂಪರ್ಕದಲ್ಲಿ 3,63,315 ಮಂದಿ ಇದ್ದಾರೆ. 4,63,564 ಜನರು ಹೋಂ ಕ್ವಾರಂಟೈನ್​​​ನಲ್ಲಿದ್ದೆರೆ ರಾಜ್ಯದಲ್ಲಿ ಈವರೆಗೆ ರಾಜ್ಯದಲ್ಲಿ 31,23,918 ಜನರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಆರೋಗ್ಯ ಇಲಾಖೆ ಕೋವಿಡ್-19 ಚಿಕಿತ್ಸಾ ಕೇಂದ್ರಗಳಲ್ಲಿ REMDESIVIR ಚುಚ್ಚುಮದ್ದಿನ ಬಳಕೆಗಾಗಿ ಎಸ್ಒಪಿ ( ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು) ಅನುಸರಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅನೇಕ ಪ್ರಕರಣಗಳಲ್ಲಿ ಸಮಯಕ್ಕೆ ಸರಿಯಾಗಿ ರೆಮ್ಡಿಸಿವಿರ್ ಸಿಗದೇ ರೋಗಿಗಳು ಪರದಾಡುವಂತಾಗಿತ್ತು. ಈ ಔಷಧ ಸದ್ಬಳಕೆ ಆಗುವುದರ ಜೊತೆಗೆ ದುರ್ಬಳಕೆ ಆಗದಂತೆ ತಡೆಯಲು ಅಗತ್ಯ ಕ್ರಮವನ್ನ ಇಲಾಖೆ ತೆಗೆದುಕೊಂಡಿದೆ.

ABOUT THE AUTHOR

...view details