ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಸಾಹಿತಿ ಡಾ.ದೊಡ್ಡರಂಗೇಗೌಡ ಆಯ್ಕೆ - Kannada Sahitya sammelana news

ಗುದ್ದಲ್ಯಪ್ಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿರುವ ವಿಶಾಲ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಸುಮಾರು 25 ಎಕರೆ ವಿಸ್ತಾರವಾದ ಮೈದಾನವನ್ನು ಗುರುತಿಸಲಾಗಿದೆ. ಫೆಬ್ರವರಿ 26 ರಿಂದ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ತಿಳಿಸಿದರು.

Kannada Sahitya sammelana in february
ಫೆ. 26 ರಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

By

Published : Jan 22, 2021, 5:45 PM IST

ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್ ತಿಳಿಸಿದರು.

ಜಿ.ಹೆಚ್.ಗುದ್ದಲ್ಯಪ್ಪ ಹಳ್ಳಿಕೇರಿ ಕಾಲೇಜು ಪಕ್ಕದ 25 ಎಕರೆ ಜಮೀನಿನಲ್ಲಿ ಫೆಬ್ರವರಿ 26, 27 ಮತ್ತು 28 ರಂದು ನಡೆಯಲಿದೆ. 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೋವಿಡ್ ನಿಯಮಗಳನ್ನ ಸಡಿಲಿಸಬೇಕು. ಸರ್ಕಾರಕ್ಕೆ ಈಗಾಗಲೇ ಸಾಹಿತ್ಯ ಪರಿಷತ್ತಿನಿಂದ ಮನವಿ ಮಾಡಲಾಗಿದೆ. ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಆರೋಗ್ಯ ಇಲಾಖೆಯ ಅಭಿಪ್ರಾಯ ಕೂಡ ಸರ್ಕಾರ ಕೇಳಲಿ ಎಂದರು.

ನಾವು ಈಗಾಗಲೇ ಜಾಗ ಗುರುತಿಸಿ ತಯಾರಾಗಿದ್ದೇವೆ. ಸುಮಾರು 25 ಎಕರೆ ವಿಸ್ತಾರವಾದ ಮೈದಾನವನ್ನ ಗುರುತಿಸಲಾಗಿದೆ. ಗುದ್ದಲ್ಯಪ್ಪ ಹಳ್ಳಿಕೇರಿ ಕಾಲೇಜಿನ ಪಕ್ಕದಲ್ಲಿರುವ ವಿಶಾಲವಾದ ಮೈದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಫೆಬ್ರವರಿ 26 ರಿಂದ ಸಾಹಿತ್ಯ ಸಮ್ಮೇಳಕ್ಕೆ ತಯಾರಿ ನಡೆಯಲಿದೆ. ಒಂದು ದಿನಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಸರ್ಕಾರಕ್ಕೆ ಅನುಮತಿಗಾಗಿ ಈಗಾಗಲೇ ಪ್ರಸ್ತಾವನೆ ಕೂಡ ಕಳಿಸಲಾಗಿದೆ. ಫೆಬ್ರವರಿ ಮೊದಲ ವಾರದೊಳಗೆ ಸರ್ಕಾರದ ಅನುಮತಿ ಸಿಗುವ ವಿಶ್ವಾಸ ಇದೆ. ಸುಮಾರು 500 ಮಳಿಗೆಗಳು ಸಮ್ಮೇಳನದಲ್ಲಿ ಇರಲಿವೆ ಎಂದು ಹೇಳಿದರು.

ಇದನ್ನೂ ಓದಿ: 'ಕಪ್ಪತ್ತಗುಡ್ಡ' ಔಷಧೀಯ ಸಸ್ಯ ಸಂಪತ್ತಿನ ಕುರಿತು ಪುಸ್ತಕ ಬರೆದ ದಂಪತಿ

For All Latest Updates

ABOUT THE AUTHOR

...view details