ಬೆಂಗಳೂರು:ರಾಜ್ಯದಲ್ಲಿಂದು 8,477 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 85 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 7,43,848ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,13,538ಕ್ಕೆ ತಲುಪಿದೆ.
ರಾಜ್ಯದಲ್ಲಿಂದು 8,477 ಮಂದಿಗೆ ಕೊರೊನಾ ದೃಢ, 8841 ಮಂದಿ ಗುಣಮುಖ - Karnataka Corona News
ರಾಜ್ಯದಲ್ಲಿ ಕಳೆದೊಂದು ವಾರದ ಹಿಂದೆ ಇಳಿಮುಖವಾಗಿದ್ದ ಕೊರೊನಾ ಪ್ರಕರಣಗಳು ಮತ್ತೀಗ ಏರಿಕೆಯತ್ತಾ ಸಾಗಿದೆ. ಇಂದು 8,477 ಮಂದಿಗೆ ಕೊರೊನಾ ದೃಢವಾಗಿದ್ದು, 85 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕ ಕೊರೊನಾ ಪ್ರಕರಣ
ಇಂದು 8,841 ಮಂದಿ ಗುಣಮುಖರಾಗಿದ್ದು, ಈವರೆಗೆ 6,20,008 ಮಂದಿ ಬಿಡುಗಡೆಯಾಗಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 10,283ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 939 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಬೆಂಗಳೂರಿನಲ್ಲಿಂದು ಒಟ್ಟು 3,788 ಮಂದಿಯಲ್ಲಿ ಕೋವಿಡ್ ವರದಿಯಾಗಿದ್ದು, 3,520 ಮಂದಿ ಗುಣಮುಖರಾಗಿದ್ದಾರೆ. 45 ಮಂದಿ ಮೃತಪಟ್ಟಿದ್ದಾರೆ.