ಬೆಂಗಳೂರು:ಮುಂಬೈ ಕಂಟಕದಿಂದಾಗಿ ಇಂದು ಒಂದೇ ದಿನ 84 ಹೊಸ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಹಳೆಯ ದಾಖಲೆಗಳನ್ನ ಮೀರಿ ದಾಖಲೆಯ ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಈವರೆಗೆ 37 ಮಂದಿ ಬಲಿಯಾಗಿದ್ದು, 521 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 672 ಸೋಂಕಿತರನ್ನು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
'ಮಹಾ'ನಂಜು: ಕರ್ನಾಟಕದಲ್ಲಿ ಇಂದು 84 ಕೊರೊನಾ ಪಾಸಿಟಿವ್ ಕೇಸ್ ಪತ್ತೆ.! - ಕರ್ನಾಟಕದಲ್ಲಿ ಇಂದು 84 ಕೊರೊನಾ ಪಾಸಿಟಿವ್ ಕೇಸ್ ಪತ್ತೆ
ಇಂದು ಕರ್ನಾಟಕದಲ್ಲಿ 84 ಹೊಸ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,231ಕ್ಕೆ ಏರಿಕೆಯಾಗಿದೆ. ಈವರೆಗೆ 37 ಮಂದಿ ಬಲಿಯಾಗಿದ್ದು, 521 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಶಿವಾಜಿನಗರದ ಕೇಸ್ 653 ರಿಂದ ಇಂದು 16 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅಂತರ್ ರಾಜ್ಯದಿಂದ ಪ್ರಯಾಣ ಮಾಡಿದ ಒಬ್ಬರಲ್ಲಿ ಸೋಂಕು ದೃಢವಾಗಿದೆ. ದಾಬಸ್‌ಪೇಟೆಗೆ ತೆರಳಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇತ್ತ ಮೈಸೂರಿಗೆ ನಂಜನಗೂಡಿನ ನಂಜು ಮಾಯವಾಗಿದ್ದು, ಆದರೆ ಮೈಸೂರಿಗೆ ಮತ್ತೆ ಕೊರೊನಾ ಕಾಲಿಟ್ಟಿದೆ.
ಇನ್ನು ಇಂದು ಹಾಸನ 4, ಮಂಡ್ಯ 17, ರಾಯಚೂರು 6, ಬೆಳಗಾವಿ 2, ವಿಜಯಪುರ 5, ಕೊಪ್ಪಳ 3, ಕೊಡಗು 1, ಮೈಸೂರು 1, ಬೆಂಗಳೂರು 18, ಗದಗ 5, ಬಳ್ಳಾರಿ ,1 ದಾವಣಗೆರೆ 1, ಕಲಬುರಗಿ 6, ಉತ್ತರ ಕನ್ನಡ 8, ಯಾದಗಿರಿ 5, ಬೀದರ್ 1 ಹಾಗೂ ಬೆಳಗಾವಿಯಲ್ಲಿ 1 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.