ಬೆಂಗಳೂರು: ರಾಜ್ಯದಲ್ಲಿ ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿ ಹತ್ತು ತಿಂಗಳು ಶಾಲಾ ಬಾಗಿಲು ಮುಚ್ಚಿದ್ದು ಬಾಲ್ಯ ವಿವಾಹಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಬಾಲ್ಯ ವಿವಾಹದ ಪ್ರಮಾಣ ಭಾರಿ ಹೆಚ್ಚಳವಾಗಿದೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಶಾಲೆಗಳು ಬಂದ್ ಆದ ತಕ್ಷಣ ಮಕ್ಕಳಿಗೆ ದುಡಿಯುವ ಕೆಲಸ ತೋರಿಸಿದ ಪೋಷಕರು ಬಾಲ ಕಾರ್ಮಿಕರನ್ನಾಗಿ ಮಾಡಿದ್ದು, ನಂತರ ಬಾಲ್ಯ ವಿವಾಹ ಮಾಡಲು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಬಾಲ್ಯ ವಿವಾಹಕ್ಕೆ ಇರುವ ಸರ್ಕಾರದ ನಿರ್ಬಂಧವನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯ ವಿವಾಹ ಮಾಡುವ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.
ಫೆಬ್ರವರಿ 2020 ರಿಂದ ಸೆಪ್ಟೆಂಬರ್ 2020 ರವರೆಗಿನ ಅಂಕಿ ಅಂಶದ ಪ್ರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಠಿಣ ನಿರ್ಧಾರದ ನಡುವೆಯೂ ಬಾಲ್ಯ ವಿವಾಹ ಮಾಡಿರುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆದಿದೆ. ಆದರೂ ಬಾಲ್ಯ ವಿವಾಹ ತಡೆಯುವಲ್ಲಿ ಇಲಾಖೆ ಬಹುತೇಕ ಯಶಸ್ವಿಯಾಗಿದೆ.