ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಇಂದು 826 ಮಂದಿಗೆ ಕೋವಿಡ್: ಸಾವು ಶೂನ್ಯ - Karnataka corona news

Karnataka COVID update report.. ರಾಜ್ಯಾದ್ಯಂತ ಇಂದು 826 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 600 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ.

ಕೋವಿಡ್
ಕೋವಿಡ್

By

Published : Jul 3, 2022, 9:49 PM IST

ಬೆಂಗಳೂರು:ರಾಜ್ಯದಲ್ಲಿ ಭಾನುವಾರ 826 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಯಾವುದೇ ಕೋವಿಡ್ ಸಾವು ವರದಿಯಾಗಿಲ್ಲ. 22,348 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಆ ಪೈಕಿ 826 ಮಂದಿಗೆ ಸೋಂಕು ದೃಢಪಟ್ಟಿದೆ. 600 ಮಂದಿ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ 6,666 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ.3.25, ವಾರದ ಸೋಂಕಿತರ ಪ್ರಮಾಣ ಶೇ.4.08ರಷ್ಟಿದೆ. ಈ ವಾರದ ಸಾವಿನ ಪ್ರಮಾಣ ಶೇ.0.06 ಇದೆ. ಬೆಂಗಳೂರಿನಲ್ಲಿ ಇಂದು 746 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,06,716ಕ್ಕೆ ಏರಿಕೆ ಆಗಿದೆ. ಇಂದು 573 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೂ ಕೋವಿಡ್ ಸಾವಿನ ಸಂಖ್ಯೆ16,969 ಇದೆ. ರಾಜಧಾನಿಯಲ್ಲಿ 6,248 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:ಪಿಎಂಒ ಹೆಸರಲ್ಲಿ ಚಾಮರಾಜನಗರ ಡಿಸಿಗೆ ಕರೆ.. ಬಿಳಿಗಿರಿರಂಗನಾಥ ದೇವಾಲಯಕ್ಕೆ ಬಂದಾಗ ವಿಶೇಷ ಸೌಲಭ್ಯಕ್ಕೆ ಬೇಡಿಕೆ

ABOUT THE AUTHOR

...view details