ಬೆಂಗಳೂರು :ರಾಜ್ಯದಲ್ಲಿಂದು 1,01,549 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 818 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,69361ಕ್ಕೆ ಏರಿದೆ. ಪಾಸಿಟಿವಿಟಿ ದರ ಶೇ. 0.80 ರಷ್ಟಿದೆ.
ಇನ್ನು, 1,414 ಸೋಂಕಿತರು ಗುಣಮುಖರಾಗಿದ್ದಾರೆ. ಈ ತನಕ 29,17,944 ಜನರು ಡಿಸ್ಜಾರ್ಜ್ ಆಗಿದ್ದಾರೆ. 13,741 ಸಕ್ರಿಯ ಪ್ರಕರಣಗಳಿವೆ. 21 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 37,648ಕ್ಕೆ ಏರಿದೆ. ಈ ಮೂಲಕ ಸಾವಿನ ಪ್ರಮಾಣ ಶೇ.2.56ರಷ್ಟಿದೆ.