ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಊಹೆ ಮಾಡದ ರೀತಿಯಲ್ಲಿ ಹಬ್ಬಲು ಶುರು ಮಾಡಿದೆ. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ 2ನೇ ಹಂತದ ಮೆಟ್ರೋದಲ್ಲಿ ಕೆಲಸ ಮಾಡ್ತಿದ್ದ 80 ಕಾರ್ಮಿಕರಿಗೆ ಮಹಾಮಾರಿ ತಗುಲಿರುವುದು ದೃಢಪಟ್ಟಿದೆ.
2ನೇ ಹಂತದ ಮೆಟ್ರೋದಲ್ಲಿ ಕೆಲಸ ಮಾಡ್ತಿದ್ದ 80 ಕಾರ್ಮಿಕರಿಗೆ ಕೊರೊನಾ ದೃಢ!
ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು, ಇದೀಗ ಮೆಟ್ರೋ ಕಾಮಗಾರಿ ಮಾಡ್ತಿದ್ದ 80 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
Covid-19 positive
80 ಕಾರ್ಮಿಕರು ನಾಗಾವರ-ಗೊಟ್ಟಿಗೆರೆ ಪ್ರದೇಶದಲ್ಲಿ ನಮ್ಮ ಮೆಟ್ರೋ 2ನೇ ಹಂತದ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಅವರಿಗೆ ಸೋಂಕು ತಗಲಿರುವುದು ವರದಿಯಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ಸಮೀಪದಲ್ಲಿ ಬಂದು ನಿಂತಿದೆ. ಹೀಗಾಗಿ ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ರಾಜಧಾನಿ ಸಂಪೂರ್ಣವಾಗಿ ಲಾಕ್ಡೌನ್ ಆಗಲಿದೆ.